Select Your Language

Notifications

webdunia
webdunia
webdunia
webdunia

Gold Price today: ಮತ್ತೆ ಏರಿತು ಚಿನ್ನದ ರೇಟು, ಬೆಳ್ಳಿಯಿಂದಲೂ ದಾಖಲೆ

Gold
ಬೆಂಗಳೂರು: ಚಿನ್ನದ ಬೆಲೆ ಸದ್ಯಕ್ಕಂತೂ ಇಳಿಯುವ ಲಕ್ಷಣಗಳೇ ಕಾಣುತ್ತಿಲ್ಲ. ನಿನ್ನೆ ಕೊಂಚವೇ ಇಳಿಕೆಯಾಗಿದ್ದ ಪರಿಶುದ್ಧದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣವಾಗಿದ್ದು ಚಿನ್ನದ ಬೆಲೆಯೂ ಭಾರೀ ಏರಿಕೆಯಾಗುತ್ತಲೇ ಇದೆ. ಕಳೆದ ನಾಲ್ಕೈದು ದಿನಗಳಿಂದ ಪರಿಶುದ್ಧ ಚಿನ್ನದ ದರ ಲಕ್ಷದಿಂದ ಕೆಳಗೆ ಬರುತ್ತಿಲ್ಲ. ನಿನ್ನೆ ಕೊಂಚ ಮಟ್ಟಿಗೆ ಇಳಿಕೆಯಾದರೂ ಸಮಾಧಾನಪಡುವಷ್ಟೇನೂ ಇರಲಿಲ್ಲ. ಇಂದು ಮತ್ತೆ ಪರಿಶುದ್ಧದ ಚಿನ್ನದ ದರ ಏರಿಕೆಯಾಗಿದೆ.. ನಿನ್ನೆ ಪರಿಶುದ್ಧ ಚಿನ್ನದ ದರ 1,02, 165.00 ರೂ.ಗಳಷ್ಟಿತ್ತು. ಇಂದು ಕೊಂಚ ಏರಿಕೆಯಾಗಿದ್ದು 1,02, 645.00 ರೂ.ಗಳಿಗೆ ಬಂದು ನಿಂತಿದೆ.

 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಮಟ್ಟಿಗೆ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 17 ರೂ. ಏರಿಕೆಯಾಗಿದ್ದು 10,108 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 15 ರೂ. ಏರಿಕೆಯಾಗಿದ್ದು 9,265 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 12 ರೂ. ಏರಿಕೆಯಾಗಿದ್ದು 7,581 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ದರವಂತೂ ಇಂದು ದಾಖಲೆಯ ಏರಿಕೆ ಕಂಡುಬಂದಿದೆ. ಇಂದು ಬೆಳ್ಳಿ ದರ ಮತ್ತೆ 1000 ರೂ.ಗಳಷ್ಟು ಏರಿಕೆಯಾಗಿದೆ.  ಇಂದು ಪ್ರತೀ ಕೆ.ಜಿ. ಬೆಳ್ಳಿ ದರ 1,12, 000 ರೂ. ಗೆ ಬಂದು ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹನಿಮೂನ್ ಹಂತಕಿ ಸೋನಂ ರಘುವಂಶಿಯ ಮತ್ತೊಂದು ಸೀಕ್ರೆಟ್ ಬಯಲು