Daily Horoscope

Select Your Language

Notifications

webdunia
webdunia
webdunia
webdunia

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Gold
ಬೆಂಗಳೂರು: ವಿದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಚಿನ್ನದ ಬೆಲೆ ಮೇಲೆ ಬಹಳ ತಟ್ಟಿದೆ. ಲಕ್ಷ ದಾಟಿದ್ದ ಪರಿಶುದ್ಧ ಚಿನ್ನದ ದರ ಇಂದೂ ಲಕ್ಷದಲ್ಲೇ ಇದೆ. ಆದರೆ ಇಂದು ಕೊಂಚ ಕಡಿಮೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರಂತ್ಯಕ್ಕೆ ಲಕ್ಷ ತಲುಪಿದ್ದ ಪರಿಶುದ್ಧ ಚಿನ್ನದ ದರ ಯಾಕೋ ಲಕ್ಷದೊಳಗೆ ಬರುವ ಲಕ್ಷಣ ಕಾಣುತ್ತಿಲ್ಲ. ಆದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣವಾಗಿದ್ದು ಚಿನ್ನದ ಬೆಲೆಯೂ ಭಾರೀ ಏರಿಕೆಯಾಗುತ್ತಲೇ ಇದೆ. ಆದರೆ ಇಂದು ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ಹಾಗಿದ್ದರೂ ಸಮಾಧಾನಪಡುವಷ್ಟೇನೂ ಇಳಿಕೆಯಾಗಿಲ್ಲ. ನಿನ್ನೆ ಪರಿಶುದ್ಧ ಚಿನ್ನದ ದರ 1,02, 475.00 ರೂ.ಗಳಷ್ಟಿತ್ತು. ಇಂದು ಕೊಂಚ ಇಳಿಕೆಯಾಗಿದ್ದು 1,02, 165.00 ರೂ.ಗಳಿಗೆ ಬಂದು ನಿಂತಿದೆ.

 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಮಟ್ಟಿಗೆ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 54 ರೂ. ಏರಿಕೆಯಾಗಿದ್ದು 10,091 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 50 ರೂ. ಏರಿಕೆಯಾಗಿದ್ದು 9,250 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 41 ರೂ. ಏರಿಕೆಯಾಗಿದ್ದು 7,569 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ದರವಂತೂ ಇಂದು ದಾಖಲೆಯ ಏರಿಕೆ ಕಂಡುಬಂದಿದೆ. ಇಂದು ಬೆಳ್ಳಿ ದರ ಮತ್ತೆ 1000 ರೂ.ಗಳಷ್ಟು ಏರಿಕೆಯಾಗಿದೆ.  ಇಂದು ಪ್ರತೀ ಕೆ.ಜಿ. ಬೆಳ್ಳಿ ದರ 1,11, 000 ರೂ. ಗೆ ಬಂದು ತಲುಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾವಿಗೆ ಮುನ್ನ ಮನುಷ್ಯನ ತಲೆಗೆ ಬರುವ ವಿಚಾರಗಳೇನು