Publish Date: Tue, 17 Jun 2025 (09:58 IST)
Updated Date: Tue, 17 Jun 2025 (10:04 IST)
ಹೈದರಾಬಾದ್: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ವಾತಾವರಣದಿಂದಾಗಿ ಕರ್ನಾಟಕದ ಮೇಲೆ ಆಗುವ ಪರಿಣಾಮಗಳೇನು? ಇಲ್ಲಿದೆ ವಿವರ.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದ ಭಾರತಕ್ಕೆ ಮುಖ್ಯವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಇದು ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ. ಇರಾನ್ ನಿಂದ ಭಾರತ ಹೆಚ್ಚು ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ.
ಇದೇ ತೈಲವೇ ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮಹಾನಗರಗಳಿಗೂ ಪೂರೈಕೆಯಾಗುತ್ತದೆ. ಬೆಂಗಳೂರಿನಲ್ಲಿ ಇದೀಗ 1 ಲೀ. ಪೆಟ್ರೋಲ್ ಬೆಲೆ 102.92 ರೂ. ಇದೆ. ಒಂದು ವೇಳೆ ಇರಾನ್ ನಿಂದ ಕಚ್ಚಾ ತೈಲ ಬೆಲೆ ಪೂರೈಕೆ ಸಮರ್ಪಕವಾಗಿ ಆಗದೇ ಇದ್ದಲ್ಲಿ ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ ಏರಿಕೆಯಾಗಲಿದೆ.
ಪರಿಶುದ್ಧ ಚಿನ್ನದ ದರ ಬೆಂಗಳೂರಿನಲ್ಲಿ ಈಗಾಗಲೇ 1 ಲಕ್ಷ ದಾಟಿ ದಾಖಲೆ ಬರೆದಿದೆ. ಎರಡೂ ದೇಶಗಳ ನಡುವೆ ಸಂಘರ್ಷ ಮುಂದುವರಿದರೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಇದೇ ರೀತಿ ಯುದ್ಧ ಮುಂದುವರಿದರೆ ಮುಂದಿನ 6 ತಿಂಗಳಲ್ಲಿ 12 ರಿಂದ 13 ಸಾವಿರ ಹೆಚ್ಚಳವಾಗಲಿದೆ. ಹೀಗಾಗಿ ಈ ಎರಡು ವಿಚಾರಗಳು ನೇರವಾಗಿ ಪರಿಣಾಮ ಬೀರುವುದು ಮಧ್ಯಮ ವರ್ಗದ ಮೇಲೆಯೇ. ಇದರಿಂದ ಕರ್ನಾಟಕ ಸೇರಿದಂತೆ ಭಾರತಕ್ಕೇ ಇರಾನ್-ಇಸ್ರೇಲ್ ಯುದ್ಧ ಸಂಕಷ್ಟ ತಂದೊಡ್ಡಲಿದೆ.