Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ಬೆಲೆ ಭಾರೀ ಏರಿಕೆ

Gold
ಬೆಂಗಳೂರು: ಕಳೆದ ವಾರಂತ್ಯದಲ್ಲಿ ಪರಿಶುದ್ಧ ಚಿನ್ನದ ದರ ದಾಖಲೆಯ ಮಟ್ಟ ತಲುಪಿತ್ತು. ಇಂದಂತೂ ದಾಖಲೆಯ ಬೆಲೆ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರದ ಆರಂಭದಲ್ಲಿ ಲಕ್ಷದ ಗಡಿಯಲ್ಲಿದ್ದ ಚಿನ್ನದ ದರ ವಾರಂತ್ಯಕ್ಕೆ ಬರುವಾಗ ಲಕ್ಷ ದಾಟಿ ದಾಖಲೆ ಮಾಡಿತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರ ಕೇಳಿದರೇ ಶಾಕ್ ಆಗುವಂತಿದೆ. ಪರಿಶುದ್ಧ ಚಿನ್ನದ ದರ ಇಂದು ಮತ್ತಷ್ಟು ಏರಿಕೆ ಕಂಡಿದೆ. ಮೊನ್ನೆ ಪರಿಶುದ್ಧ ಚಿನ್ನದ ದರ 1,02, 755.00 ರೂ.ಗಳಷ್ಟಿತ್ತು. ಇಂದು ಭಾರೀ ಏರಿಕೆಯಾಗಿದ್ದು 1,03, 055.00 ರೂ.ಗಳಿಗೆ ಬಂದು ನಿಂತಿದೆ. ಇದು ಸರ್ವಕಾಲಿಕ ದಾಖಲೆಯಾಗಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 17 ರೂ. ಇಳಿಕೆಯಾಗಿದ್ದು 10,151 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 15 ರೂ. ಇಳಿಕೆಯಾಗಿದ್ದು 9,305 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 12 ರೂ. ಇಳಿಕೆಯಾಗಿದ್ದು 7,614 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಕಳೆದ ವಾರವೇ ಲಕ್ಷ ಮೀರಿದ್ದ ಬೆಳ್ಳಿ ದರ ಇನ್ನೂ ಕಡಿಮೆಯಾಗಿಲ್ಲ. ಇಂದು ಬೆಳ್ಳಿ ದರ ಕೇವಲ 100 ರೂ.ಗಳಷ್ಟು ಕಡಿಮೆಯಾಗಿದೆ.  ಇಂದು ಪ್ರತೀ ಕೆ.ಜಿ. ಬೆಳ್ಳಿ ದರ 1,09, 900 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾ ಗಾಂಧಿ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು