ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆರೋಗ್ಯ ಹದಗೆಟ್ಟಿದ್ದು, ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲವು ಸಮಯದಿಂದ ಸೋನಿಯಾ ಆರೋಗ್ಯ ಪದೇ ಪದೇ ಕೈಕೊಡುತ್ತಿದೆ.
ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದಾಗಿ ಸೋನಿಯಾ ಬಳಲುತ್ತಿದ್ದು, ಗ್ಯಾಸ್ಟ್ರೋ ವಿಭಾಗದ ವೈದ್ಯರು ತಪಾಸಣೆ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಸೋನಿಯಾ ಆರೋಗ್ಯ ಕೈಕೊಡುತ್ತಿದೆ. ಆದರೆ ಅವರಿಗೆ ನಿಜವಾಗಿ ಏನು ಸಮಸ್ಯೆಯಾಗುತ್ತಿದೆ ಎಂದು ಇದುವರೆಗೆ ಮಾಹಿತಿ ಬಂದಿಲ್ಲ.
ಕೆಲವೇ ದಿನಗಳ ಹಿಂದೆ ಸೋನಿಯಾ ಗಾಂಧಿ ಆರೋಗ್ಯ ತಪಾಸಣೆಗಾಗಿ ಶಿಮ್ಲಾಗೆ ಹೋಗಿದ್ದರು. ರಕ್ತದೊತ್ತಡ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇದೀಗ ಮತ್ತೆ ಆರೋಗ್ಯ ಸಮಸ್ಯೆಗೊಳಗಾಗಿದ್ದಾರೆ. ಅವರ ಅನಾರೋಗ್ಯದ ಸುದ್ದಿ ತಿಳಿಯುತ್ತಿದ್ದಂತೇ ಕಾಂಗ್ರೆಸ್ ಬೆಂಬಲಿಗರು ಅವರ ಆರೋಗ್ಯ ಸುಧಾರಿಸಲಿ ಎಂದು ಹಾರೈಸುತ್ತಿದ್ದಾರೆ.
ಕೆಲವು ಸಮಯದಿಂದ ಸೋನಿಯಾ ಉಸಿರಾಟದ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ. 2022 ರಲ್ಲಿ ಕೊರೋನಾ ಸೋಂಕಿಗೆ ತುತ್ತಾದ ಬಳಿಕ ಅವರ ಆರೋಗ್ಯ ಪದೇ ಪದೇ ಕೈ ಕೊಡುತ್ತಲೇ ಇದೆ.