Select Your Language

Notifications

webdunia
webdunia
webdunia
webdunia

National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ

Rahul Gandhi-Mallikarjun Kharge

Krishnaveni K

ನವದೆಹಲಿ , ಬುಧವಾರ, 16 ಏಪ್ರಿಲ್ 2025 (21:08 IST)
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್ ಎಂದು ಏನೂ ವಿವಾದಿತ ಅಂಶಗಳಿಲ್ಲದೇ ಇದ್ದರೂ ಕೇಂದ್ರ ಸರ್ಕಾರ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ. ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

‘ಈ ಕೇಸ್ ನಲ್ಲಿ ಏನೂ ಇಲ್ಲ. ಹಣಕಾಸಿನ ಸಮಸ್ಯೆಯಿಂದ ಪತ್ರಿಕೆ ಕೆಲವು ಸಮಯದಿಂದ ಮುಚ್ಚಿದೆ. ಸಾಲ, ಡೊನೇಷನ್ ಮೂಲಕ ಸೋನಿಯಾ ಗಾಂಧಿಯವರು ಮತ್ತೆ ಅದನ್ನು ತೆರೆಯಲು ಪ್ರಯತ್ನ ಮಾಡಿದರು. ಈಗ ಇವರು ಸಾಲ ತೆಗೆದುಕೊಳ್ಳುವುದೇ ತಪ್ಪು ಎನ್ನುತ್ತಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನಗತ್ಯವಾಗಿ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಕಾಂಗ್ರೆಸ್ ಗೆ ತೊಂದರೆ ಕೊಡುತ್ತಿದೆ. ಇದರ  ವಿರುದ್ಧ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಖರ್ಗೆ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Waqf Bill:ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿರುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ: ಸುಪ್ರೀಂಕೋರ್ಟ್