ಅಹಮ್ಮದಾಬಾದ್: ಎಐಸಿಸಿ ಅಧಿವೇಶನದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಐಷಾರಾಮಿ ಸೋಫಾ ಸೆಟ್, ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಹಮ್ಮದಾಬಾದ್ ನಲ್ಲಿ ಎಐಸಿಸಿ ಅಧಿವೇಶನ ನಡೆದಿದೆ. ಇದರಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆದಿಯಾಗಿ ಪಕ್ಷದ ಎಲ್ಲಾ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ. ಈ ವೇಳೆ ರಾಹುಲ್, ಸೋನಿಯಾ ಐಷಾರಾಮಿ ಸೋಫಾದಲ್ಲಿ ಮತ್ತು ಪಕ್ಷದ ಅಧ್ಯಕ್ಷರಾಗಿರುವ ಖರ್ಗೆ ಅಲ್ಲೇ ಪಕ್ಕದಲ್ಲಿ ಸಾಮಾನ್ಯ ಕುರ್ಚಿಯಲ್ಲಿ ಕೂರಿಸುವ ವಿಡಿಯೋವೊಂದನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಬಡ ಜನರನ್ನು ದ್ವಿತೀಯ ವರ್ಗದ ಜನರಂತೆ ಟ್ರೀಟ್ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈಗ ನೋಡಿದರೆ ಅವರ ಪಕ್ಷದಲ್ಲೇ ಅವರ ಅಧ್ಯಕ್ಷರಿಗೇ ದ್ವಿತೀಯ ದರ್ಜೆಯ ಟ್ರೀಟ್ ಮೆಂಟ್ ಸಿಗುತ್ತಿದೆ ಎಂದು ಬಿಜೆಪಿ ನಾಯಕರು ಟ್ರೋಲ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರಿಗೇ ಬೆಲೆಯಿಲ್ಲ. ಇದು ಕೇವಲ ಒಂದು ಕುಟುಂಬದ ಪಕ್ಷ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇಡ. ಇಲ್ಲಿ ಅಧ್ಯಕ್ಷರಿಗೇ ಬೆಲೆಯಿಲ್ಲ ಎಂದು ಬಿಜೆಪಿ ವಿಡಿಯೋ ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.