ನವದೆಹಲಿ: ಕಾಂಗ್ರೆಸ್ ಜಾತಿ ಗಣತಿ ಮೂಲಕ ದೇಶದ ಎಕ್ಸ್ ರೇ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಟ್ನಾದಲ್ಲಿ ನಡೆದ ಸಂವಿಧಾನ ಸಮ್ಮೇಳನದಲ್ಲಿ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಈಗ ಬಡವರ್ಗದವರನ್ನು ದ್ವಿತೀಯ ದರ್ಜೆಯ ಜನರನ್ನಾಗಿ ಟ್ರೀಟ್ ಮಾಡಲಾಗುತ್ತಿದೆ. ಅಂಬೇಡ್ಕರ್ ದಲಿತರಿಗಾಗಿ ಹೋರಾಡಿದರು. ಅವರಿಗೆ ದಲಿತರ ನೋವು, ಕಷ್ಟ ಗೊತ್ತಿತ್ತು. ಅವರು ಸತ್ಯಕ್ಕಾಗಿ ಹೋರಾಡಿದವರು. ಹಾಗಾಗಿಯೇ ಮಹಾತ್ಮಾ ಗಾಂಧೀಜಿಯವರ ಬಯೋಗ್ರಫಿಯನ್ನು ಸತ್ಯದ ಜೊತೆಗೆ ನನ್ನ ಪ್ರಯೋಗ ಎಂದು ಇಡಲಾಯಿತು ಹೊರತು ಸುಳ್ಳಿನ ಜೊತೆಗೆ ನನ್ನ ಪ್ರಯೋಗ ಎಂದು ಇಟ್ಟಿರಲಿಲ್ಲ. ಇದನ್ನು ಬಹುಶಃ ಪ್ರಧಾನಿ ಮೋದಿ ಬರೆಯಬಹುದು. ಭಾರತದಲ್ಲಿ ಸತ್ಯ ಹೇಳುವುದು ಕಷ್ಟ. ಅಂಬೇಡ್ಕರ್, ಗೌತಮ ಬುದ್ಧ, ಗಾಂಧೀಜಿ ನಮಗೆ ಹೇಳಿದ್ದು ಏನು? ಸತ್ಯ ಹೇಳಲು ಹಿಂಜರಿಕೆ ಬೇಡ ಎಂದು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿ ಮೂಲಕ ಎಕ್ಸ್ ರೇ ಮಾಡಲಿದೆ. ಆ ಮೂಲಕ ಹಿಂದುಳಿದ ವರ್ಗದವರಿಗೂ ಸಮಾನ ಅವಕಾಶ ನೀಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.