ಅಹಮ್ಮದಾಬಾದ್: ಇಂದಿನಿಂದ ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ನಡೆಯುತ್ತಿರುವ ಎಐಸಿಸಿ ಸಭೆಗೆ ಬಂದ ರಾಹುಲ್ ಗಾಂಧಿ ಸರ್ದಾರ್ ವಲ್ಲಾಭಾಯಿ ಪಟೇಲ್ ಅವರ ಪ್ರತಿಮೆಗೆ ಹಾರ ಹಾಕಿದ ಸ್ಟೈಲ್ ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅಷ್ಟಕ್ಕೂ ಅಗಿದ್ದೇನು ನೋಡಿ.
ಎಐಸಿಸಿ ಸಭೆಗೆ ಮುನ್ನ ಇಂದು ಮಹಾತ್ಮಾ ಗಾಂಧೀಜಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪ್ರತಿಮೆಗಳಿಗೆ ಹಾರ ಹಾಕಿ ಗೌರವ ನಮನ ಸಲ್ಲಿಸಲಾಯಿತು. ಅದರಂತೆ ರಾಹುಲ್ ಕೂಡಾ ಮಾಲಾರ್ಪಣೆ ಮಾಡಿದ್ದಾರೆ.
ಆದರೆ ರಾಹುಲ್ ಹಾರ ಹಾಕಿದ ಶೈಲಿಯೇ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಕದಲ್ಲಿದ್ದವರಿಂದ ಹಾರ ಪಡೆದುಕೊಂಡು ಆತುರ ಆತುರವಾಗಿ ಪಟೇಲ್ ಅವರ ಪ್ರತಿಮೆಗೆ ರಿಂಗ್ ಬಿಸಾಕುವಂತೆ ಹಾರ ಬಿಸಾಕಿದ್ದಾರೆ.
ಇದನ್ನು ಗಮನಿಸಿದ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಅದೇನು ಸಂತೆಯಲ್ಲಿರುವ ರಿಂಗ್ ಗೇಮ್ ಅಲ್ಲ, ಪ್ರತಿಮೆಗೆ ಸ್ವಲ್ಪ ಗೌರವದಿಂದ ಹಾರ ಹಾಕಿ ಎಂದು ಸಲಹೆ ನೀಡಿದ್ದಾರೆ. ಮತ್ತೆ ಕೆಲವರು ರಾಹುಲ್ ಗಾಂಧಿಗೆ ಇಷ್ಟು ಅರ್ಜೆಂಟ್ ಯಾಕಪ್ಪಾ ಎಂದು ಕಾಲೆಳೆದಿದ್ದಾರೆ.