Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ಬೆಲೆ ಏರಿಕೆ ನಡುವೆ ಇಂದು ಕೊಂಚ ರಿಲೀಫ್

Gold

Krishnaveni K

ಬೆಂಗಳೂರು , ಮಂಗಳವಾರ, 17 ಜೂನ್ 2025 (11:43 IST)
ಬೆಂಗಳೂರು: ಇಸ್ರೇಲ್ ಇರಾನ್ ಯುದ್ಧದ ವಾತಾವರಣದ ನಡುವೆ ಭಾರತದಲ್ಲೂ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ತಲುಪಿತ್ತು. ಆದರೆ ಇಂದು ಕೊಂಚ ರಿಲೀಫ್ ಸಿಕ್ಕಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರದ ಆರಂಭದಲ್ಲಿ ಲಕ್ಷದ ಗಡಿಯಲ್ಲಿದ್ದ ಚಿನ್ನದ ದರ ವಾರಂತ್ಯಕ್ಕೆ ಬರುವಾಗ ಲಕ್ಷ ದಾಟಿ ದಾಖಲೆ ಮಾಡಿತ್ತು. ಆದರೆ ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣವಾಗಿದ್ದು ಚಿನ್ನದ ಬೆಲೆಯೂ ಭಾರೀ ಏರಿಕೆಯಾಗುತ್ತಲೇ ಇದೆ. ಆದರೆ ಇಂದು ಕೊಂಚ ಮಟ್ಟಿಗೆ ಇಳಿಕೆಯಾಗಿದೆ. ಹಾಗಿದ್ದರೂ ಸಮಾಧಾನಪಡುವಷ್ಟೇನೂ ಇಳಿಕೆಯಾಗಿಲ್ಲ. ನಿನ್ನೆ ಪರಿಶುದ್ಧ ಚಿನ್ನದ ದರ 1,03, 055.00 ರೂ.ಗಳಷ್ಟಿತ್ತು. ಇಂದು ಕೊಂಚ ಇಳಿಕೆಯಾಗಿದ್ದು 1,02, 475.00 ರೂ.ಗಳಿಗೆ ಬಂದು ನಿಂತಿದೆ.

 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 114 ರೂ. ಇಳಿಕೆಯಾಗಿದ್ದು 10,037 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 105 ರೂ. ಇಳಿಕೆಯಾಗಿದ್ದು 9,200 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 86 ರೂ. ಇಳಿಕೆಯಾಗಿದ್ದು 7,528 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಕಳೆದ ವಾರವೇ ಲಕ್ಷ ಮೀರಿದ್ದ ಬೆಳ್ಳಿ ದರ ಇನ್ನೂ ಕಡಿಮೆಯಾಗಿಲ್ಲ. ಇಂದು ಬೆಳ್ಳಿ ದರ ಮತ್ತೆ 100 ರೂ.ಗಳಷ್ಟು ಏರಿಕೆಯಾಗಿದೆ.  ಇಂದು ಪ್ರತೀ ಕೆ.ಜಿ. ಬೆಳ್ಳಿ ದರ 1,10, 000 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Viral video: ಸೈಕ್ಲಿಂಗ್ ಮಾಡಲು ಹೋಗಿ ದಢಾರನೆ ಬಿದ್ದ ಡಿಕೆ ಶಿವಕುಮಾರ್