Publish Date: Tue, 17 Jun 2025 (11:28 IST)
Updated Date: Tue, 17 Jun 2025 (11:35 IST)
ಬೆಂಗಳೂರು: ವಿಧಾನಸೌಧದ ಮುಂಭಾಗ ಸೈಕ್ಲಿಸ್ಟ್ ಗಳೊಂದಿಗೆ ಸೈಕ್ಲಿಂಗ್ ಮಾಡಲು ಹೋಗಿ ಡಿಸಿಎಂ ಡಿಕೆ ಶಿವಕುಮಾರ್ ದಢಾರನೆ ಬಿದ್ದೇ ಬಿಟ್ಟರು. ಈ ವಿಡಿಯೋ ಈಗ ವೈರಲ್ ಆಗಿದೆ.
ಇಂದು ವಿಧಾನಸೌಧದ ಮುಂಭಾಗ ಇಂದು ಪರಿಸರ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಎಂ ಡಿಕೆ ಶಿವಕುಮಾರ್ ಪರಿಸರ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಅವರು ಸೈಕ್ಲಿಂಗ್ ಮಾಡಿದ್ದಾರೆ.
ವಿಧಾನಸೌಧದ ಪೂರ್ವ ದ್ವಾರದಲ್ಲಿ ಇತರೆ ಸೈಕ್ಲಿಸ್ಟ್ ಗಳ ಜೊತೆ ಡಿಕೆಶಿ ಕೂಡಾ ಸೈಕ್ಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಆದರೆ ಕೊನೆಯಲ್ಲಿ ಮೆಟ್ಟಿಲುಗಳ ಬಳಿಕ ಸೈಕಲ್ ನಿಲ್ಲಿಸಬೇಕು ಎನ್ನುವಷ್ಟರಲ್ಲಿ ಸೈಕಲ್ ಸಮೇತ ನಿಯಂತ್ರಣ ತಪ್ಪಿ ಬಿದ್ದೇ ಬಿಟ್ಟಿದ್ದಾರೆ.
ತಕ್ಷಣವೇ ಅವರ ಜೊತೆಗಿದ್ದ ಸಹಾಯಕರು ಅವರನ್ನು ಹಿಡಿದು ನಿಲ್ಲಿಸಿದ್ದಾರೆ. ಇದನ್ನು ಅಲ್ಲಿದ್ದ ಮಾಧ್ಯಮದವರು ಸೆರೆ ಹಿಡಿದಿದ್ದನ್ನು ಗಮನಿಸಿದ ಡಿಕೆ ಶಿವಕುಮಾರ್ ಇದನ್ನೆಲ್ಲಾ ಏಯ್ ಇದನ್ನೆಲ್ಲಾ ತೋರಿಸ್ಬೇಡ್ರಪ್ಪಾ ಎಂದು ತಮಾಷೆ ಮಾಡಿದ್ದಾರೆ.