ದುಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 92 ಕ್ಕೆ ಆಲೌಟ್ ಆದ ಬೆನ್ನಲ್ಲೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ.
ವಿಜಯ್ ಮಲ್ಯ ಆರ್ ಸಿಬಿ ತಂಡದ ಮಾಲಿಕರಾಗಿದ್ದಾಗ ದೀಪಿಕಾ ಪಡುಕೋಣೆ ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲಿ ಹಾಜರಿದ್ದು ತಂಡಕ್ಕೆ ಚಿಯರ್ ಮಾಡುತ್ತಿದ್ದರು. 2010 ರಲ್ಲಿ ಇದೇ ರೀತಿ ರಾಜಸ್ಥಾನ್ ರಾಯಲ್ಸ್ ತಂಡ ಆರ್ ಸಿಬಿ ವಿರುದ್ಧ 92 ಕ್ಕೆ ಆಲೌಟ್ ಆದಾಗ ದೀಪಿಕಾ 92 ಎನ್ನುವುದೂ ಒಂದು ಮೊತ್ತವಾ? ಎಂದು ಲೇವಡಿ ಮಾಡಿದ್ದರು.
ಅದೇ ಟ್ವೀಟ್ ಈಗ ವೈರಲ್ ಆಗಿದೆ. ಇಂದು ನೆಟ್ಟಿಗರು ಆರ್ ಸಿಬಿ ಅದೇ ಮೊತ್ತಕ್ಕೆ ಆಲೌಟ್ ಆಗಿದ್ದನ್ನು ಅಂದಿನ ದೀಪಿಕಾ ಟ್ವೀಟ್ ಬಳಸಿ ವ್ಯಂಗ್ಯ ಮಾಡಿದ್ದಾರೆ.