Daily Horoscope

Select Your Language

Notifications

webdunia
webdunia
webdunia
webdunia

ಕೊಹ್ಲಿಯ ದಾಖಲೆಯ ಪಂದ್ಯ ಸೋಲಿನಲ್ಲಿ ಕೊನೆಯಾಯ್ತು

ಆರ್ ಸಿಬಿ
ದುಬೈ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳ ಹೀನಾಯ ಸೋಲುಂಡಿತು.


ವಿಪರ್ಯಾಸವೆಂದರೆ ಈ ಪಂದ್ಯ ಕೊಹ್ಲಿ ಪಾಲಿಗೆ ಸ್ಮರಣೀಯ ಪಂದ್ಯವಾಗಿತ್ತು. ಒಂದೇ ತಂಡದ ಪರ 200 ಪಂದ್ಯವಾಡಿದ ದಾಖಲೆಯನ್ನು ಕೊಹ್ಲಿ ಮಾಡಿದ್ದರು. ಆದರೆ ಅದೇ ಪಂದ್ಯವನ್ನು ಆರ್ ಸಿಬಿ ಹೀನಾಯವಾಗಿ ಸೋತಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋಯಿತು. ವಿರಾಟ್ ಕೊಹ್ಲಿ (5), ಎಬಿಡಿ ವಿಲಿಯರ್ಸ್(0), ಗ್ಲೆನ್ ಮ್ಯಾಕ್ಸ್ ವೆಲ್ (10) ಮೂವರೂ ರನ್ ಗಳಿಸಲು ವಿಫಲರಾಗಿದ್ದು ಆರ್ ಸಿಬಿಗೆ ದೊಡ್ಡ ಹೊಡೆತ ನೀಡಿತು. ದೇವದತ್ತ್ ಪಡಿಕ್ಕಲ್ 22 ರನ್ ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಆರ್ ಸಿಬಿ ನಿಗದಿತ 19 ಓವರ್ ಗಳಲ್ಲಿ 92 ರನ್ ಗಳಿಗೆ ಆಲೌಟ್ ಆಯಿತು. ಕೆಕೆಆರ್ ಪರ ಮಾರಕ ದಾಳಿ ಸಂಘಟಿಸಿದ ವರುಣ್ ಚಕ್ರವರ್ತಿ 3, ಆಂಡ್ರ್ಯೂ ರಸೆಲ್ 3 ಮತ್ತು ಫರ್ಗ್ಯುಸನ್ 2 ವಿಕೆಟ್ ಕಬಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಹುದ್ದೆಗಿದೆ ಭಾರೀ ಡಿಮ್ಯಾಂಡ್