Select Your Language

Notifications

webdunia
webdunia
webdunia
webdunia

ಭಾರತ-ಆಸ್ಟ್ರೇಲಿಯಾ ಮಹಿಳಾ ಏಕದಿನ: ಮಿಥಾಲಿ ರಾಜ್ ಅರ್ಧಶತಕ

ಭಾರತ-ಆಸ್ಟ್ರೇಲಿಯಾ ಮಹಿಳಾ ಏಕದಿನ: ಮಿಥಾಲಿ ರಾಜ್ ಅರ್ಧಶತಕ
ಸಿಡ್ನಿ , ಮಂಗಳವಾರ, 21 ಸೆಪ್ಟಂಬರ್ 2021 (09:25 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲು ಬ್ಯಾಟಿಂಗ್ ಮಾಡಿರುವ ಭಾರತದ ವನಿತೆಯರು 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದೆ.


ನಾಯಕಿ ಮಿಥಾಲಿ ರಾಜ್ 61 ರನ್ ಗಳಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ಯಶ್ತಿಕಾ ಭಾಟಿಯಾ 35 ರನ್ ಗಳಿಸಿದರು. ಆದರೆ ಹೊಡೆಬಡಿಯ ಆಟಗಾರ್ತಿಯರಾದ ಶಫಾಲಿ ವರ್ಮ 8 ಮತ್ತು ಸ್ಮೃತಿ ಮಂಥನಾ 16 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ವಿಕೆಟ್ ಕೀಪರ್ ರಿಚಾ ಘೋಷ್ ಅಜೇಯ 32 ರನ್ ಗಳಿಸಿದರು.

ಈಗಾಗಲೇ ದ.ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಸತತವಾಗಿ ಏಕದಿನ ಸರಣಿ ಸೋತಿರು ಮಿಥಾಲಿ ರಾಜ್ ಪಡೆಗೆ ಈ ಸರಣಿ ಗೆಲ್ಲುವುದು ಪ್ರತಿಷ್ಠೆಯ ವಿಚಾರವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಕನ್ನಡಿಗರ ಪಂಜಾಬ್ ಗೆ ಇಂದು ರಾಜಸ್ಥಾನ್ ರಾಜರ ಸವಾಲು