Publish Date: Tue, 21 Sep 2021 (08:55 IST)
Updated Date: Tue, 21 Sep 2021 (08:57 IST)
ಬೆಂಗಳೂರು: ವಿರಾಟ್ ಕೊಹ್ಲಿಗೆ ನಾಯಕರಾಗಿ ಇದೇ ಕೊನೆಯ ಐಪಿಎಲ್. ಅವರ ಬಳಿಕ ಆರ್ ಸಿಬಿಯಲ್ಲಿ ನಾಯಕತ್ವ ವಹಿಸಬಲ್ಲ ಸಮರ್ಥರು ಯಾರಿದ್ದಾರೆ?
ಕೊಹ್ಲಿ ನಂತರ ಆರ್ ಸಿಬಿ ತಂಡದ ಪ್ರಮುಖ ಆಧಾರ ಸ್ತಂಬವೆಂದರೆ ಎಬಿಡಿ ವಿಲಿಯರ್ಸ್. ಅನುಭವಿ ಆಟಗಾರ ಮಾತ್ರವಲ್ಲದೆ, ಆಟಗಾರರೊಂದಿಗೂ ಉತ್ತಮ ಸಂವಹನ ಹೊಂದಿರುವ ಎಬಿಡಿಗೆ ಸದ್ಯದ ಮಟ್ಟಿಗೆ ಕ್ಯಾಪ್ಟನ್ ಪಟ್ಟ ಕಟ್ಟಬಹುದು. ಆದರೆ ವಯಸ್ಸಿನ ಕಾರಣದಿಂದ ಅವರು ದೀರ್ಘಾವಧಿಯ ನಾಯಕನಾಗಲು ಸಾಧ್ಯವಿಲ್ಲ.
ಇತ್ತೀಚೆಗೆ ಐಪಿಎಲ್ ನಲ್ಲಿ ಯುವ ಆಟಗಾರರು ನಾಯಕರಾಗಿ ಕ್ಲಿಕ್ ಆಗುತ್ತಿದ್ದಾರೆ. ಹೀಗಾಗಿ ಆರ್ ಸಿಬಿ ತಂಡದ ಪ್ರತಿಭಾವಂತ ಆಲ್ ರೌಂಡರ್ ದೇವದತ್ತ್ ಪಡಿಕ್ಕಲ್ ಗೆ ಭವಿಷ್ಯದ ದೃಷ್ಟಿಯಿಂದ ನಾಯಕನ ಪಟ್ಟ ಕಟ್ಟಿದರೂ ಅಚ್ಚರಿಯಿಲ್ಲ. ಹೇಗಿದ್ದರೂ ಅನುಭವಿಗಳಾದ ಕೊಹ್ಲಿ, ಎಬಿಡಿ ಸಾಥ್ ಇರುತ್ತದೆ. ಈದೃಷ್ಟಿಯಿಂದ ಯುವಕರಿಗೆ ನಾಯಕತ್ವ ನೀಡಿದರೂ ಅಚ್ಚರಿಯಿಲ್ಲ.