ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತಿನಲ್ಲಿ ಸಂಸದರೇ ಬುದ್ಧಿಗೇಡಿಗಳಂತೆ ಹೇಳಿಕೆ ಕೊಡುವುದನ್ನು ನೋಡಿದ್ದೇವೆ. ಆದರೆ ಈಗ ಕತ್ತೆಯೊಂದು ಎಂಟ್ರಿಕೊಟ್ಟು ಫುಲ್ ಕಾಮಿಡಿ ಆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಸಂಸತ್ತಿನೊಳಗೆ ಕಲಾಪ ನಡೆಯುತ್ತಿರುತ್ತದೆ. ಎಲ್ಲಾ ಸಂಸದರೂ ತಮ್ಮ ಆಸನದಲ್ಲಿ ಕೂತು ಕಲಾಪದಲ್ಲಿ ಭಾಗಿಯಾಗಿರುತ್ತಾರೆ. ಬಹಳ ಗಂಭೀರವಾದ ವಾತಾವರಣವಿದ್ದಾಗ ಇದ್ದಕ್ಕಿದ್ದಂತೆ ಕತ್ತೆಯೊಂದು ಸೀದಾ ಸದನ ನಡೆಯುವ ಸ್ಥಳಕ್ಕೇ ಎಂಟ್ರಿ ಕೊಡುತ್ತದೆ.
ಎಲ್ಲಿತ್ತೋ ಕತ್ತೆಯೊಂದು ಬಿರುಸಾಗಿ ಓಡಿಕೊಂಡು ಬಂದು ಅಲ್ಲಿದ್ದ ಸೀಟು, ಕಾಗದ ಪತ್ರಗಳನ್ನೆಲ್ಲಾ ಚಲ್ಲಾಪಿಲ್ಲಿ ಮಾಡಿಬಿಡುತ್ತದೆ. ಜನರನ್ನು ನೋಡಿ ಕತ್ತೆಗೆ ಭಯವಾಗಿತ್ತೋ, ಕತ್ತೆಯ ನೋಡಿ ಜನರು ಗಾಬರಿಯಾದರೋ ಒಟ್ಟಿನಲ್ಲಿ ಕ್ಷಣ ಮಾತ್ರದಲ್ಲಿ ಸಂಸತ್ ನಲ್ಲಿ ಎಲ್ಲವೂ ಅಲ್ಲೋಲಕಲ್ಲೋಲವಾಗುತ್ತದೆ.
ಇನ್ನು, ಕತ್ತೆ ಮಾಡಿದ ಅವಾಂತರಕ್ಕೆ ಸಂಸದರು ಕಾಮಿಡಿ ಮಾಡಿಕೊಂಡು ಜೋರಾಗಿ ನಗುತ್ತಾರೆ. ಆದರೆ ಕತ್ತೆ ಅಲ್ಲಿದ್ದ ಕಾಗದ ಪತ್ರಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಗಾಬರಿಯಾಗಿ ನಿಂತಿರುತ್ತದೆ. ಕತ್ತೆಯ ದಾಳಿಗೆ ಅಲ್ಲಿದ್ದ ಪೀಠೋಪಕರಣಗಳೂ ಹಾನಿಗೀಡಾಗುತ್ತವೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.