ದುಬೈ: ಏರ್ ಶೋನಲ್ಲಿ ಭಾರತೀಯ ವಾಯುಸೇನೆಯ ತೇಜಸ್ ವಿಮಾನ ಪತನವಾಗುತ್ತಿದ್ದಂತೇ ಪಾಕಿಸ್ತಾನಿಯರು ನಗುತ್ತಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ-ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳು. ಅದರಲ್ಲೂ ಆಪರೇಷನ್ ಸಿಂಧೂರ್ ಬಳಿಕ ಎರಡೂ ದೇಶಗಳ ನಡುವಿನ ಶತ್ರುತ್ವ ಮತ್ತಷ್ಟು ಹೆಚ್ಚಾಗಿದೆ. ಇದೀಗ ದುಬೈ ಏರ್ ಶೋನಲ್ಲಿ ಭಾರತದ ವಿಮಾನ ಪತನವಾಗಿದ್ದನ್ನು ಪಾಕಿಸ್ತಾನಿಯರು ಎನ್ನಲಾದ ಇಬ್ಬರು ವಿಡಿಯೋ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಇಬ್ಬರೂ ಭಾರತದ ವಿಮಾನ ಪತನವಾಗಿದೆ ಎಂದು ಜೋರಾಗಿ ನಗುತ್ತಾರೆ. ಜೋರಾಗಿ ನಗುತ್ತಾ ನೋಡಿ ಭಾರತದ ವಿಮಾನ ಪತನವಾಗಿದೆ ಎಂದು ವಿಡಿಯೋ ಮಾಡುತ್ತಾ ಸಾಗುತ್ತಾರೆ. ಇದು ಪಾಕಿಸ್ತಾನದ ಇಬ್ಬರು ಪತ್ರಕರ್ತರು ಮಾಡಿದ ವಿಡಿಯೋ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಖಚಿತತೆಯಿಲ್ಲ.ಪಾಕಿಸ್ತಾನಿಯರು ಎಂದಿದ್ದರೂ ಅವರ ಬುದ್ಧಿ ತೋರಿಸದೇ ಬಿಡಲ್ಲ ಎಂದು ಜನ ಹಿಡಿ ಶಾಪ ಹಾಕಿದ್ದಾರೆ.
ನಿನ್ನೆ ತೇಜಸ್ ವಿಮಾನ ಪತನದಲ್ಲಿ ಭಾರತದ ಪೈಲೆಟ್ ನಮಾಂಶ್ ಸ್ಯಾಲ್ ಸಜೀವ ದಹನವಾಗಿದ್ದಾರೆ. ಕೆಳಹಂತದ ಶೋ ನೀಡುವ ವೇಳೆ ವಿಮಾನ ಪತನವಾಗಿದೆ. ತಕ್ಷಣವೇ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.