ನವದೆಹಲಿ: ಎದುರಾಳಿಗಳನ್ನು ಉರಿಸೋದು ಅಂದ್ರೆ ಏನು ಎಂದು ಬಹುಶಃ ಭಾರತೀಯ ವಾಯುಸೇನೆಯನ್ನು ನೋಡಿ ಕಲಿಯಬೇಕು. ಇದಕ್ಕೆ ಸಾಕ್ಷಿ ಭಾರತೀಯ ವಾಯುಸೇನೆಯ ಊಟದ ಮೆನು.
ಭಾರತೀಯ ವಾಯುಸೇನೆಯ ಊಟದ ಮೆನುವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿರುವ ತಿಂಡಿ ಮತ್ತು ಸಿಹಿ ತಿನಿಸುಗಳ ಹೆಸರುಗಳನ್ನು ವಿಶೇಷವಾಗಿ ಹೆಸರಿಸಲಾಗಿದೆ. ಅದನ್ನು ನೋಡಿ ನೆಟ್ಟಿಗರು ಉರಿಸೋದು ಅಂದರೆ ಇದು ಎನ್ನುತ್ತಿದ್ದಾರೆ.
ಈ ಮೆನುವಿನಲ್ಲಿ ತಿಂಡಿಗಳ ಹೆಸರನ್ನು ಇತ್ತೀಚೆಗೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯು ಸೇನೆ ದಾಳಿ ನಡೆಸಿದ ಪಾಕಿಸ್ತಾನದ ತಾಣಗಳ ಹೆಸರನ್ನು ಸೇರಿಸಿ ಬರೆಯಲಾಗಿದೆ. ಅಂದರೆ ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲ, ಬಹವಾಲ್ಪುರ ನಾನ್, ಸರ್ಗೋದಾ ದಾಲ್ ಮಖಾನಿ, ಸುಕ್ಕೂರ್ ಶಾಮ್ ಸವೇರಾ ಕೋಫ್ತಾ, ಬಾಲಾಕೋಟ್ ತಿರಮಿಸು, ಮುಝಾಫರಾಬಾದ್ ಕುಲ್ಫೀ ಇತ್ಯಾದಿ ಪಾಕಿಸ್ತಾನದ ಹೆಸರುಗಳನ್ನು ಇಡಲಾಗಿದೆ.
ಜೊತೆಗೆ ಮೆನುವಿನ ಮೇಲ್ಭಾಗದಲ್ಲಿ ಐಎಎಫ್ ಗೆ 93 ವರ್ಷ: ದೋಷರಹಿತ, ಪ್ರಭಾವಶಾಲೀ ಮತ್ತು ನಿಖರ ಎಂದು ಶೀರ್ಷಿಕೆಯನ್ನೂ ನೀಡಲಾಗಿದೆ. ಈ ಮೂಲಕ ಪಾಕಿಸ್ತಾನಕ್ಕೆ ಟಾಂಗ್ ಕೊಡಲಾಗಿದೆ.