Select Your Language

Notifications

webdunia
webdunia
webdunia
webdunia

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

Former Prime Minister Imran Khan, Government of Pakistan, Afghanistan Times

Sampriya

ರಾವಲ್ಪಿಂಡಿ , ಬುಧವಾರ, 26 ನವೆಂಬರ್ 2025 (17:46 IST)
Photo Credit X
ರಾವಲ್ಪಿಂಡಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಜೈಲಿನಲ್ಲಿಯೇ ಸಾವನ್ನಪ್ಪಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಅಡಿಯಾಲಾ ಜೈಲಿನ ಅಭಿಮಾನಿಗಳು ಸೇರಿದ್ದು ಭಾರೀ ಹೈಡ್ರಾಮಾ ನಡೆದಿದೆ. 

ಇಮ್ರಾನ್ ಖಾನ್ ಅವರು ಪ್ರತ್ಯೇಕ ಬಂಧನದಲ್ಲಿದ್ದಾರೆಂಬ ವರದಿಗಳ ನಡುವೆಯೇ, ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವದಂತಿಗಳು ಬುಧವಾರ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಉಂಟಾಗಿದೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ 2023ರಿಂದ ಜೈಲಿನಲ್ಲಿರುವ 72 ವರ್ಷದ ಇಮ್ರಾನ್ ಖಾನ್, ಜೈಲು ಅಧಿಕಾರಿಗಳ ವಿರುದ್ಧ ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಹಿಂದೆ ಹಲವು ಬಾರಿ ಆರೋಪಿಸಿದ್ದರು.

ಅಡಿಯಾಲಾ ಜೈಲಿನೊಳಗೆ ಇಮ್ರಾನ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ವದಂತಿ ಎಕ್ಸ್‌ ನಲ್ಲಿ ವ್ಯಾಪಕವಾಗಿ ಹರಡಿದೆ. ಇದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇಮ್ರಾನ್ ಖಾನ್ ಅವರ ಸಹೋದರಿಯರಾದ ನೊರೀನ್, ಅಲೀಮಾ ಮತ್ತು ಉಝ್ಮಾ ಅವರು, ತಮ್ಮ ಸಹೋದರನನ್ನು ಭೇಟಿ ಮಾಡಲು ಹಲವು ವಾರಗಳಿಂದ ಅವಕಾಶ ನೀಡಲಾಗುತ್ತಿಲ್ಲವೆಂದು ಆರೋಪಿಸಿದ್ದಾರೆ. ಜೈಲಿನಲ್ಲಿ ಕ್ರೂರವಾಗಿ ಹಲ್ಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಿರುವ ಅವರು, ತಕ್ಷಣ ಭೇಟಿಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಇಮ್ರಾನ್ ಖಾನ್ ಕೊಲೆಯಾದರು ಎಂಬ ಅಫ್ಗಾನಿಸ್ತಾನ ಟೈಮ್ಸ್‌ ಎಂಬ ಹೆಸರಿನ ಖಾತೆಯಿಂದ ಬಂದ ಪೋಸ್ಟ್ ವೈರಲ್ ಆಗಿದೆ. ಆದರೆ ಇದನ್ನು ಯಾವುದೇ ಮೂಲಗಳು ಖಚಿತಪಡಿಸಿಲ್ಲ.

ಜುಲೈನಲ್ಲಿ ಜೈಲಿನಲ್ಲಿರುವ ಸ್ಥಿತಿಗತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಇಮ್ರಾನ್ ಖಾನ್, ತಮಗೆ ಏನಾದರೂ ಸಂಭವಿಸಿದರೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಹೊಣೆಗಾರರನ್ನಾಗಿ ಮಾಡುವಂತೆ ತಮ್ಮ ಪಕ್ಷದ ಸದಸ್ಯರಿಗೆ ಸೂಚಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ