ಕೊಲಂಬೊ: ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತೇನೆಂದು ಪಾಕಿಸ್ತಾನ ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಕಳುಹಿಸಿ ತನ್ನ ಮಾನ ತಾನೇ ಕಳೆದುಕೊಂಡಿದೆ.
ಶ್ರೀಲಂಕಾದಲ್ಲಿ ದಿತ್ವಾ ಚಂಡಮಾರುತದಿಂದ ಸಾವಿರಾರು ಮಂದಿ ಅತಂತ್ರರಾಗಿದ್ದಾರೆ. ಮನೆ, ಮಠ ಕಳೆದುಕೊಂಡು ಊಟಕ್ಕೂ ಪರದಾಡುವ ಪರಿಸ್ಥಿತಿಯಾಗಿದೆ. ಇದೀಗ ಲಂಕಾ ನೆರವಿಗೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಧಾವಿಸಿವೆ.
ತಾನೂ ನೆರವು ನೀಡುವುದಾಗಿ ಭಾರತದ ಬಳಿ ಮನವಿ ಮಾಡಿ ನಮ್ಮ ವಾಯು ಪ್ರದೇಶ ಬಳಸಿಕೊಂಡು ಪಾಕಿಸ್ತಾನ ಲಂಕಾಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿತ್ತು. ಇದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬೀಗಿತ್ತು.
ಆದರೆ ಈ ಫೋಟೋಗಳಲ್ಲಿ ಆಹಾರ ಸಾಮಗ್ರಿ ಮೇಲೆ ಬರೆದಿರುವ ದಿನಾಂಕವನ್ನು ಯಾರೋ ಪತ್ತೆ ಹಚ್ಚಿ ವೈರಲ್ ಮಾಡಿದ್ದಾರೆ. ಆಹಾರ ಸಾಮಗ್ರಿಗಳು ಅವಧಿ ಮೀರಿವೆ ಎನ್ನುವುದು ಪತ್ತೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತನ್ನ ಬಂಡವಾಳ ಬಯಲಾಗುತ್ತಿದ್ದಂತೇ ಪೋಸ್ಟ್ ಗಳನ್ನು ಪಾಕ್ ಡಿಲೀಟ್ ಮಾಡಿದೆ.