ನವದೆಹಲಿ: ಇಂಡಿಗೋ ವಿಮಾನದ ಸಮಸ್ಯೆಯಿಂದಾಗಿ ಮಗಳಿಗೆ ಸ್ಯಾನಿಟರಿ ಪ್ಯಾಡ್ ಕೊಡಿ ಎಂದು ಸಿಬ್ಬಂದಿ ಬಳಿ ತಂದೆಯೊಬ್ಬರು ಆಕ್ರೋಶದಿಂದ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ದೇಶದಲ್ಲಿ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿರುವುದರಿಂದ ಸಾಕಷ್ಟು ಪ್ರಯಾಣಿಕರು ಸಂಕಷ್ಟದಲ್ಲಿದ್ದಾರೆ. ಸಮಯಕ್ಕೆ ಸರಿಯಾಗಿ ಸೂಕ್ತ ಸ್ಥಳಗಳಿಗೆ ಹೋಗಲಾಗದೇ ಪ್ರಯಾಣಿಕರು ಅತಂತ್ರರಾಗಿದ್ದಾರೆ. ಹಲವರು ವಿಮಾನ ನಿಲ್ದಾಣದಲ್ಲೇ ಗಂಟೆಗಟ್ಟಲೆ ಕಾಯುವಂತಾಗಿದೆ.
ಇದೇ ರೀತಿ ಸಮಸ್ಯೆಗೊಳಗಾದ ವ್ಯಕ್ತಿಯೊಬ್ಬರು ತಮ್ಮ ಮಗಳಿಗಾಗಿ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ಸಿಬ್ಬಂದಿ ಮುಂದೆ ಸಾಕಷ್ಟು ಮಂದಿ ತಮ್ಮ ಸಂಕಷ್ಟ, ಅನುಮಾನಗಳನ್ನು ಕೇಳಲು ನಿಂತಿದ್ದಾರೆ.
ಈ ವೇಳೆ ಒಬ್ಬ ವ್ಯಕ್ತಿ ಸಿಸ್ಟರ್ ನನ್ನ ಮಗಳಿಗೆ ಸ್ಯಾನಿಟರಿ ಪ್ಯಾಡ್ ಬೇಕು. ಪ್ಯಾಡ್ ಬೇಕು ಕೊಡಿ. ನನ್ನ ಮಗಳಿಗೆ ರಕ್ತ ಬರುತ್ತಿದೆ. ಕೊಡಿ ಎಂದು ಆಕ್ರೋಶದಿಂದ ಕೇಳುತ್ತಾನೆ. ಆಗ ಸಿಬ್ಬಂದಿ ನಾವು ಏನೂ ಸಾಧ್ಯವಿಲ್ಲ ಎನ್ನುತ್ತಾರೆ. ಆಗ ಮತ್ತಷ್ಟು ಕೋಪಗೊಳ್ಳುವ ವ್ಯಕ್ತಿ ಯಾಕೆ ಆಗಲ್ಲ? ಸ್ಯಾನಿಟರಿ ಪ್ಯಾಡ್ ಕೊಡಿಸಿ ಎಂದು ಟೇಬಲ್ ಕುಟ್ಟಿ ಆಕ್ರೋಶ ಹೊರಹಾಕುತ್ತಾರೆ. ಈ ವಿಡಿಯೋ ಇಂಡಿಗೋ ಪ್ರಯಾಣಿಕರ ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.