ಮದುವೆ ಎಂದರೆ ಅಲ್ಲಿ ತಮಾಷೆ, ಫನ್ ಗೇಮ್ ಇರಲೇಬೇಕು. ಆದರೆ ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಅದು ಇಂತಹ ಘಟನೆಗಳನ್ನು ನೋಡಿಯೇ ಹೇಳಿರಬೇಕು. ಮದುವೆ ಮನೆಯೊಂದರ ವಿಡಿಯೋ ಒಂದು ಈಗ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ವಿಮರ್ಶೆಗೆ ಗುರಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಮದುವೆ ಮನೆಯಲ್ಲಿ ಬಂಧು,ಮಿತ್ರರೇ ವಧೂ-ವರರಿಗೆ ಆಟದ ನೆಪದಲ್ಲಿ ಅಧ್ವಾನವೇ ಸೃಷ್ಟಿಸಿದ್ದಾರೆ. ಊಟಕ್ಕೆ ಕುಳಿತ ವಧೂ-ವರರಿಗೆ ಇನ್ನಿಲ್ಲದಂತೆ ಕಾಟ ಕೊಟ್ಟಿದ್ದಾರೆ.
ವರ ಮತ್ತು ವಧುವಿನ ಕುತ್ತಿಗೆಗೆ ಬಾಟಲಿ, ಪಾತ್ರೆಗಳ ಹಾರ ಹಾಕಿದ್ದಾರೆ. ಬಳಿಕ ದೊಡ್ಡ ದೊಡ್ಡ ಬಾಸ್ಕೆಟ್ ನಲ್ಲಿ ಕಿಲೋಗಟ್ಟಲೆ ಆಹಾರ ವಸ್ತುಗಳನ್ನು ಸುರಿದಿದ್ದಾರೆ. ಅಲ್ಲದೆ, ಕೇಕ್ ತಂದು ಮುಖ, ಮೂತಿ ನೋಡದೇ ಮೆತ್ತಿದ್ದಾರೆ.
ಈ ವಿಡಿಯೋ ಈಗ ಸಾಕಷ್ಟು ಕಡೆ ಹರಿದಾಡುತ್ತಿದ್ದು ಪರ-ವಿರೋಧ ಅಭಿಪ್ರಾಯ ಕೇಳಿಬಂದಿದೆ. ಅಷ್ಟೊಂದು ಪ್ರಮಾಣದಲ್ಲಿ ಹಿಟ್ಟು ಸುರಿಯುವಾಗ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ ಏನು ಗತಿ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.