Photo Credit: ಸಾಂದರ್ಭಿಕ ಚಿತ್ರ
ತ್ರಿಶ್ಶೂರ್: ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಜೊತೆ ಬಸ್ ಕಂಡಕ್ಟರ್ ವರ್ತನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಷ್ಟಕ್ಕೂ ಆ ಕಂಡಕ್ಟರ್ ಮಾಡಿದ್ದೇನು ಈ ವಿಡಿಯೋ ನೋಡಿ.
ಇದೀಗ ಶಬರಿಮಲೆ ಅಯ್ಯಪ್ಪ ದೇವಾಲಯ ಭಕ್ತರಿಗಾಗಿ ತೆರೆದಿದೆ. ಸಾಕಷ್ಟು ಸಂಖ್ಯೆಯಲ್ಲಿ ದೇಶದ ನಾನಾ ಭಾಗಗಳಿಂದ ಮಾಲಾಧಾರಿಗಳಾಗಿ ಶಬರಿಮಲೆಗೆ ತೆರಳುತ್ತಿದ್ದಾರೆ. ಶಬರಿಮಲೆಗೆ ಹೋಗಲು ಕೇರಳ ಸರ್ಕಾರಿ ಬಸ್ ಗಳೂ ಸಾಕಷ್ಟಿವೆ.
ಇಂತಹದ್ದೇ ಬಸ್ ನಲ್ಲಿ ನಡೆದ ಘಟನೆಯಿದು. ಶಬರಿಮಲೆ ದೇವಾಲಯಕ್ಕೆ ತೆರಳುವ ಕೇರಳ ಸರ್ಕಾರೀ ಸ್ವಾಮ್ಯದ ಬಸ್ ನಲ್ಲಿ ಕಂಡಕ್ಟರ್ ಸ್ವಾಮಿಯೇ ಅಯ್ಯಪ್ಪ.. ಎಂದು ಅಯ್ಯಪ್ಪನಿಗೆ ಜೈಕಾರ ಹಾಕಿದ್ದಾರೆ. ಅವರಿಗೆ ಭಕ್ತರೂ ಸಾಥ್ ನೀಡಿದ್ದಾರೆ.
ಅಯ್ಯಪ್ಪ ದೇವಾಲಯಕ್ಕೆ ತೆರಳುವ ಬಸ್ ಆಗಿದ್ದರಿಂದ ಬಸ್ ನಲ್ಲಿದ್ದವರೆಲ್ಲರೂ ಮಾಲಾಧಾರಿಗಳೇ ಆಗಿದ್ದರು. ಹೀಗಾಗಿ ಕಂಡಕ್ಟರ್ ಸ್ವಾಮಿಯೇ ಅಯ್ಯಪ್ಪ ಎಂದು ಹಾಡು ಹಾಡಿ ಡ್ಯಾನ್ಸ್ ಮಾಡಿ ಭಕ್ತರನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.