ದೆಹಲಿ: ಮದುವೆ ಸಂಭ್ರಮಾಚರಣೆ ವೇಳೆ ಖುಷಿ ಖುಷಿಯಿಂದ ಹೈಡ್ರೋಜನ್ ಬಲೂನ್ ಹಿಡಿದುಕೊಂಡು ಹೊರಟಿದ್ದಾಗ ಸ್ಪೋಟಗೊಂಡಿದ್ದು ಭಾರೀ ಅನಾಹುತವಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ದೆಹಲಿಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಘಟನೆ ನಡೆದಿದೆ. ವಧು ಮತ್ತು ವರನ ಹಳದಿ ಸಮಾರಂಭ ನಡೆಯುತ್ತಿತ್ತು. ಇದಕ್ಕಾಗಿ ಕೈಯಲ್ಲಿ ಹೈಡ್ರೋಜನ್ ಬಲೂನ್ ಗಳ ಗುಚ್ಛವನ್ನು ಹಿಡಿದುಕೊಂಡು ಇಬ್ಬರೂ ವಿಡಿಯೋಗೆ ಪೋಸ್ ಕೊಡುತ್ತಾ ನಡೆಯುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದಂತೆ ಭಾರೀ ಬೆಂಕಿಯೊಂದಿಗೆ ಬಲೂನ್ ಗಳು ಸ್ಪೋಟಗೊಂಡಿವೆ. ಇದರಿಂದಾಗಿ ವಧು ಮತ್ತು ವರನಿಗೆ ಸುಟ್ಟ ಗಾಯಗಳಾಗಿವೆ. ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಕೆಲವೇ ಸೆಕೆಂಡುಗಳಲ್ಲಿ ಆತಂಕದ ಛಾಯೆ ಮೂಡಿದೆ.
ಇತ್ತೀಚೆಗಿನ ದಿನಗಳಲ್ಲಿ ಮದುವೆ ಎಂದರೆ ಸಂಭ್ರಮಾಚರಣೆ ಕೆಲವೊಮ್ಮೆ ಎಲ್ಲೆ ಮೀರುತ್ತದೆ. ಇದೇ ರೀತಿ ಮಾಡಲು ಹೋಗಿ ಈಗ ವದು-ವರನಿಗೇ ಗಾಯವಾಗಿ ಸಂಕಟಪಡುವಂತಾಗಿದೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.