ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂದರೆ ರಾಹುಲ್ ಗಾಂಧಿಗೆ ಎಂಥಾ ಪ್ರೀತಿ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಸಂಸತ್ ಭವನದಲ್ಲೇ ಖರ್ಗೆ ಮಸಾಜ್ ಮಾಡುವ ವಿಡಿಯೋ ಈಗ ವೈರಲ್ ಆಗಿದೆ.
ಸಂಸತ್ ಕಲಾಪದ ನಡುವೆ ಬಿಡುವಿನ ವೇಳೆಯಲ್ಲಿ ಸುಸ್ತಾಗಿ ಕೂತಿದ್ದ ಮಲ್ಲಿಕಾರ್ಜುನ ಖರ್ಗೆ ಬಳಿಗೆ ರಾಹುಲ್ ಗಾಂಧಿ ಬರುತ್ತಾರೆ. ಹಿರಿಯ ನಾಯಕ ಖರ್ಗೆ ಬಳಿಗೆ ಬರುವ ರಾಹುಲ್ ಗಾಂಧಿ ಹಿಂದೆ ನಿಂತು ಖರ್ಗೆ ಭುಜ, ಕತ್ತು ಮಸಾಜ್ ಮಾಡುತ್ತಾರೆ.
ಅವರನ್ನು ನೋಡಿ ಪ್ರಿಯಾಂಕ್ ಗಾಂಧಿ ವಾದ್ರಾ ಕೂಡಾ ಅಲ್ಲಿಗೆ ಬರುತ್ತಾರೆ. ಈ ವೇಳೆ ಪ್ರಿಯಾಂಕ್ ಕೂಡಾ ಕತ್ತು ನೋವಿಗೆ ಖರ್ಗೆಗೆ ಕೆಲವು ಟಿಪ್ಸ್ ಕೊಡುತ್ತಾರೆ. ಅಣ್ಣ-ತಂಗಿ ಇಬ್ಬರೂ ನಗು ನಗುತ್ತಲೇ ಖರ್ಗೆ ಸಾಹೇಬರ ಸೇವೆ ಮಾಡುತ್ತಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್ ಗಳು ಬಂದಿವೆ. ಕೆಲವರು ಇಬ್ಬರದ್ದೂ ಭಲೇ ಜೋಡಿ ಎಂದು ಹೊಗಳಿದ್ದಾರೆ. ಇದು ರಾಹುಲ್ ಗಾಂಧಿಯ ಸಂಸ್ಕಾರ ಎಂದು ಇನ್ನು ಕೆಲವರು ಕೊಂಡಾಡಿದ್ದಾರೆ.