ಉತ್ತರ ಪ್ರದೇಶ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನವಿಲಿಗೆ ಆಹಾರ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೋರಖ್‌ಪುರದ ಗೋರಖ್‌ನಾಥ್ ದೇವಾಲಯದ ಆವರಣದಲ್ಲಿ 'ಗೌಸೇವೆ' ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪ್ರಾಣಿಗಳೊಂದಿಗಿನ ಯೋಗಿ ಅವರ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯೋಗಿ ಅವರ ತಮ್ಮ ಕೈಯಲ್ಲಿ ಆಹಾರವನ್ನು ಹಿಡಿದುಕೊಂಡಿದ್ದಾರೆ. ನವಿಲು, ಯೋಗಿಯ ಕೈಯಲ್ಲಿದ್ದ ಧಾನ್ಯವನ್ನು ತಿಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಆದಿತ್ಯನಾಥ್ ಅವರು ಪ್ರಾಣಿ ಕಲ್ಯಾಣ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ತೋರಿಸಿದರು, ದೇವಾಲಯದ ಉಪಕ್ರಮಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸಿದರು.