ತಿರುವನಂತರಪುರಂ: ಕೇರಳದಲ್ಲಿ ಪಂಚಾಯತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆದು ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಇದೊಂದು ಅಚ್ಚರಿ ಬೆಳವಣಿಗೆ ಎಲ್ಲರ ಗಮನ ಸೆಳೆಯುತ್ತಿದೆ.
ಸೋನಿಯಾ ಗಾಂಧಿ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಾರಾ? ಅದೂ ಬಿಜೆಪಿ ಟಿಕೆಟ್ ನಿಂದ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ಅದುವೇ ಸತ್ಯ. ಆದರೆ ಈ ಸೋನಿಯಾ ಗಾಂಧಿ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಅಲ್ಲ.
ಸೋನಿಯಾ ಗಾಂಧಿ ಎಂಬ ಹೆಸರಿನ ಮಹಿಳೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಈಕೆಯ ಕುಟುಂಬಸ್ಥರು ಕಾಂಗ್ರೆಸ್ ಹಿನ್ನಲೆಯಿಂದ ಬಂದವರು. ಆಕೆಯ ತಂದೆ ದುರೈ ರಾಜ್ ಇಡುಕ್ಕಿ ಜಿಲ್ಲೆಯ ಮುನ್ನಾರ್ ಪಂಚಾಯತ್ ನ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದವರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮೇಲಿನ ಗೌರವದಿಂದ ಮಗಳಿಗೂ ಅದೇ ಹೆಸರಿಟ್ಟಿದ್ದರು.
ಈ ಸೋನಿಯಾ ಗಾಂಧಿ ಮದುವೆ ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಮುನ್ನಾರ್ ಪಂಚಾಯತ್ ಚುನಾವಣೆಯಲ್ಲಿ ಸೋನಿಯಾ ಗಾಂಧಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಹೆಸರಿನಿಂದಲೇ ಈಕೆ ಈಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.