ನವದೆಹಲಿ: ಸರ್ಕಾರದ ಸಂಚಾರಿ ಸಾಥಿ ಆ್ಯಪ್ ಫೋನ್ ಕದ್ದಾಲಿಕೆ, ಡೇಟಾ ಸೋರಿಕೆ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿ ಬೆನ್ನಲ್ಲೇ ಕೇಂದ್ರ ಸರ್ಕಾರ ಯೂಟರ್ನ್ ಹೊಡೆದಿದೆ. ಸಂಚಾರ ಸಾಥಿ ಆ್ಯಪ್ ಮೊಬೈಲ್‌ನಲ್ಲಿ ಪ್ರಿ ಇನ್‌ಸ್ಟಾಲ್ ಕಡ್ಡಾಯವಲ್ಲ ಎಂದು ಹೇಳಿದೆ.
ಭಾರತೀಯ ನಾಗರಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ದೂರಸಂಪರ್ಕ ಸಚಿವಾಲಯ ಸಂಚಾರ ಸಾಥಿ ಆ್ಯಪ್ ಕಡ್ಡಾಯಗೊಳಿಸಿತ್ತು. ಎಲ್ಲಾ ಮೊಬೈಲ್ ಉತ್ಪಾದಕರು ಭಾರತದಲ್ಲಿ ಮಾರಾಟ ಮಾಡುವ ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್ ಪ್ರೀ ಇನ್‌ಸ್ಟಾಲ್ ಮಾಡಿರಬೇಕು ಎಂದು ಆದೇಶ ನೀಡಿತ್ತು.
ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು ತೀವ್ರ ಗದ್ದಲ, ಗಂಭೀರ ಆರೋಪಗಳಿಂದ ಇದೀಗ ಕೇಂದ್ರ ಸರ್ಕಾರ ಸಂಚಾರ ಸಾಥಿ ಆ್ಯಪ್ ಕುರಿತು ಯೂಟರ್ನ್ ಹೊಡೆದಿದೆ. ಮೊಬೈಲ್‌ನಲ್ಲಿ ಪ್ರಿ ಇನ್‌ಸ್ಟಾಲ್ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ.
ಸಂಚಾರಿ ಸಾಥಿ ಆ್ಯಪ್ ಸುರಕ್ಷಿತವಲ್ಲ. ಇದು ಫೋನ್ ಕದ್ದಾಲಿಕೆ, ಡೇಟಾ ಲೀಕ್ ಮಾಡುತ್ತಿದೆ. ಇದನ್ನು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಎಲ್ಲಾ ಮೊಬೈಲ್‌ನಲ್ಲಿ ಕಡ್ಡಾಯ ಮಾಡಿದೆ ಎಂದು ಲೋಕಸಭೆಯಲ್ಲಿ ವಿಪಕ್ಷಗಳು ಗಂಭೀರ ಆರೋಪ ಮಾಡಿತ್ತು.
ಸಂಚಾರ ಸಾಥಿ ಆ್ಯಪ್ ಕುರಿತು ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಲೋಕಸಭೆಯಲ್ಲಿ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಸ್ಪಷ್ಟನೆ ಕೊಟ್ಟಿದ್ದಾರೆ. ನಾಗರೀಕರ ಸುರಕ್ಷತೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಂಚಾರ ಸಾಥಿ ಆ್ಯಪ್ ಹೆಚ್ಚು ಸುರಕ್ಷಿತವಾಗಿದೆ. ಈ ಆ್ಯಪನ್ನು ನಾಗರೀಕರ ಅನುಕೂಲಕ್ಕಾಗಿ ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದ್ದಾರೆ.