ನವದೆಹಲಿ: ಪಕ್ಷದಿಂದ ಅಮಾನತುಗೊಂಡಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಹುಮಾಯೂನ್ ಕಬೀರ್ ಅವರು ನಾಳೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಗುರುವಾರ ಹೇಳಿದ್ದಾರೆ.
ಕಬೀರ್ ಅವರು ಡಿಸೆಂಬರ್ 6 ರಂದು ಬಾಬರಿ ಮಸೀದಿ ಮಾದರಿಯಲ್ಲೇ ಹೊಸ ಮಸೀದಿ ನಿರ್ಮಾಣದ ಹೇಳಿಕೆ ನೀಡಿದ್ದ ಸಂಬಂಧ ಕಬೀರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.
"ನಾನು ನಾಳೆ ಟಿಎಂಸಿಗೆ ರಾಜೀನಾಮೆ ನೀಡುತ್ತೇನೆ. ಅಗತ್ಯವಿದ್ದರೆ, ಡಿಸೆಂಬರ್ 22 ರಂದು ನಾನು ಹೊಸ ಪಕ್ಷವನ್ನು ಘೋಷಿಸುತ್ತೇನೆ" ಎಂದು ಪಕ್ಷದ ಅಮಾನತುಗೊಂಡ ನಾಯಕ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷರು ಸಭೆಗೆ ಕರೆದಿದ್ದಾರೆ ಎಂದು ಕಬೀರ್ ಹೇಳಿದರು. ಜಿಲ್ಲಾಧ್ಯಕ್ಷರನ್ನು ಭೇಟಿ ಮಾಡಲು ನಾನು ಬಂದಿದ್ದೇನೆ, ನಂತರ ಪ್ರತಿಕ್ರಿಯೆ ನೀಡುತ್ತೇನೆ, ಆದರೆ ನನ್ನನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ, ಶಾಸಕನಾಗಿ ಅಲ್ಲ, ಸಭೆ ಮೊದಲು ನಡೆಯಲಿ ಎಂದರು.