Select Your Language

Notifications

webdunia
webdunia
webdunia
webdunia

ಮುಗಿಯದ ಇಂಡಿಗೋ ವಿಮಾನದ ರಗಳೆ: ಹುಬ್ಬಳ್ಳಿಯಲ್ಲಿ ವಧು ವರರಿಲ್ಲದೇ ನಡೆದ ನಡೆದ ಆರತಕ್ಷತೆ

Indigo airlines

Krishnaveni K

ನವದೆಹಲಿ , ಶುಕ್ರವಾರ, 5 ಡಿಸೆಂಬರ್ 2025 (11:25 IST)
Photo Credit: X
ನವದೆಹಲಿ: ಕಳೆದ ಮೂರು ದಿನಗಳಲ್ಲಿ 1000 ಕ್ಕೂ ಅಧಿಕ ಇಂಡಿಗೋ ವಿಮಾನ ರದ್ದಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹುಬ್ಬಳ್ಳಿಯಲ್ಲಂತೂ ವಧು ವರರಿಲ್ಲದೇ ಆರತಕ್ಷತೆ ನಡೆದಿದೆ.

ದೇಶದಾದ್ಯಂತ ಇಂಡಿಗೋ ವಿಮಾನ ರದ್ದತಿಯಿಂದ ಸಾಕಷ್ಟು ಜನರಿಗೆ ಸಮಸ್ಯೆಯಾಗಿದೆ. ಯಾವುದೋ ಕಾರ್ಯಕ್ರಮಗಳಿಗೆ, ಅನಿವಾರ್ಯ ಕಾರಣಗಳಿಗೆ ಪ್ರಯಾಣ ಮಾಡಬೇಕಾದವರು ತೊಂದರೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇದುವರೆಗೆ ಸುಮಾರು 100 ವಿಮಾನಗಳು ರದ್ದಾಗಿವೆ. ಇದರಿಂದಾಗಿ ತುರ್ತಾಗಿ ತೆರಳಬೇಕಾದ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಈ ಸಮಸ್ಯೆ ಒಂದು ಮದುವೆಗೂ ತಟ್ಟಿದೆ. ಭುವನೇಶ್ವರದಲ್ಲಿ ಮದುವೆಯಾಗಿದ್ದ ಜೋಡಿಯೊಂದು ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ತಮ್ಮ ಆರತಕ್ಷತೆಗೆ ಡಿಸೆಂಬರ್ 2 ಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಆದರೆ ವಿಮಾನ ರದ್ದಾಗಿದ್ದರಿಂದ ತಮ್ಮ ಆರತಕ್ಷತೆಗೆ ತಾವೇ ಬರಲಾಗದ ಸ್ಥಿತಿಯಾಗಿದೆ. ಇದರಿಂದಾಗಿ ವಧು ವರರು ಡ್ರೆಸ್ ಮಾಡಿಕೊಂಡು ಕೂತು ಆನ್ ಲೈನ್ ನಲ್ಲೇ ಆರತಕ್ಷತೆ ಮಾಡಿಕೊಳ್ಳುವಂತಾಗಿದೆ. ಮದುವೆ ಛತ್ರದಲ್ಲಿ ವಧು ಮತ್ತು ವರನ ಸ್ಕ್ರೀನ್ ಹಾಕಿ ಬಂಧುಗಳು ಬಂದು ಹರಸಿ ಹೋಗಿದ್ದಾರೆ.

ಇಂಡಿಗೋ ವಿಮಾನ ರದ್ದು, ವಿಳಂಬದಿಂದಾಗಿ ಸಾಕಷ್ಟು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿರುವ ಹಿನ್ನಲೆಯಲ್ಲಿ ಕ್ಷಮೆ ಕೇಳಿರುವ ಸಂಸ್ಥೆ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಕಟಣೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುರ್ಚಿ ಕದನದ ಬೆನ್ನಲ್ಲೇ ಸಚಿವರಿಗೆ ಖಡಕ್ ಸೂಚನೆ ಕೊಟ್ಟ ಸಿಎಂ ಸಿದ್ದರಾಮಯ್ಯ