Uses of Ghee : ತುಪ್ಪವು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಪ್ಪ ಕೊಬ್ಬಿನಲ್ಲಿ ಕರಗುವ ವಿಟಮಿನ್ ಡಿ, ಕೆ, ಇ, ಎ ಅನ್ನು ಹೊಂದಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ.
ಅಷ್ಟೇ ಅಲ್ಲದೇ ತುಪ್ಪವು ದೇಹಕ್ಕೆ ಹಾನಿ ಮಾಡುವ ವಿಷದ ವಿರುದ್ಧ ಹೋರಾಡುತ್ತದೆ.
ತುಪ್ಪದ ಬಳಕೆ ಆಹಾರದಲ್ಲಿ ಯಾವಾಗಲೂ ಉತ್ತಮ. ಇದರಲ್ಲಿನ ಆರೋಗ್ಯಕರ ಅಂಶಗಳು ದೇಹಕ್ಕೆ ಅಗತ್ಯವಾಗಿದೆ. ಅದರಲ್ಲಿಯೂ ಬೆಳೆಯುವ ಮಕ್ಕಳಿಗೆ ತುಪ್ಪ ಅತ್ಯಗತ್ಯ. ಇದೇ ಕಾರಣದಿಂದಲೂ ಹಿಂದಿನ ತಲೆ ಮಾರುಗಳಿಂದ ಅಡುಗೆಯಲ್ಲಿ ತುಪ್ಪದ ಬಳಕೆ ಮಾಡಲಾಗುತ್ತಿದೆ.
ಆಹಾರದ ರುಚಿ ಮಾತ್ರವಲ್ಲದೇ ಆರೋಗ್ಯವನ್ನು ಕಾಪಾಡುವ ಗುಣ ತುಪ್ಪಕ್ಕೆ ಇದೆ. ತುಪ್ಪದಲ್ಲಿ ಕೊಬ್ಬು ದೇಹಕ್ಕೆ ಅತ್ಯವಶ್ಯಕವಾಗಿದೆ. ದೇಹಕ್ಕೆ ಉತ್ತಮ ಕೊಬ್ಬನ್ನು ನೀಡುವ ತುಪ್ಪ ಪ್ರತಿನಿತ್ಯ ಅಡುಗೆಯಲ್ಲಿ ಬಳಸಿದರೆ ಉತ್ತಮ ತುಪ್ಪದಲ್ಲಿ ದೇಹಕ್ಕೆ ಅಗತ್ಯವಾದ ಡಿ ಕೆ ಇ ಎ ವಿಟಮಿನ್ ಇವೆ. ಮಲಪದ್ಧತೆ ಸಮಸ್ಯೆ ಅನುಭವಿಸುತ್ತಿರುವವರಿಗೆ ತುಪ್ಪ ಪರಿಣಾಮಕಾರಿ ಮದ್ದಾಗಿದೆ. ತುಪ್ಪವು ರೋಗ ನಿರೋಧಕ ಮತ್ತು ಉರಿಯೂತದ ಗುಣ ಹೊಂದಿದೆ.
ಚರ್ಮದ ಕಾಂತಿಯನ್ನು ಕೂಡ ಈ ತುಪ್ಪ ಹೆಚ್ಚಿಸುತ್ತದೆ. ಚರ್ಮದ ಆರೋಗ್ಯ ರಕ್ಷಿಸುvಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ, ಚರ್ಮದಲ್ಲಿರುವ ವಿಷಕಾರಿ ತ್ಯಾಜ್ಯವನ್ನು ನಿವಾರಿಸಿ. ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ
ತುಪ್ಪ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಕೆಟ್ಟ ಕೊಬ್ಬನ್ನು ಕರಗಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳನ್ನು ಆಯುರ್ವೇದದ ಸೂಪರ್ ಫುಡ್ ಆಗಿ ಬಳಸಲಾಗುತ್ತದೆ. ತುಪ್ಪದಲ್ಲ ಒಮೆಗಾ ಕೊಬ್ಬಿನಾಮ್ಲ ಇದು ತೂಕವನ್ನು ಕಡಿಮೆ ಮಾಡುತ್ತದೆ
ಜೀರ್ಣಕ್ರಿಯೆಗೆ ಕೂಡ ಸಾಕಷ್ಟಯ ಸಹಾಯಕಾರಿಯಾಗಿದೆ. ಸ್ನಾಯುಗಳಿಗೆ ಮತ್ತು ಕೀಲುಗಳಿಗೆ ಬೇಕಾದ ಪೋಷಕಾಂಶ ನೀಡುತ್ತದೆ. ಇದರಿಂದ ಸ್ನಾಯುಗಳು ಬಲವಾಗುತ್ತದೆ. ಇದೇ ಕಾರಣದಿಂದ ಬೆಳೆಯುವ ಮಕ್ಕಳ ಮೂಳೆ ಬಲಗೊಳ್ಳಲು ದಿನನಿತ್ಯ ತುಪ್ಪ ನೀಡಬೇಕು ಎನ್ನುತ್ತಾರೆ. ಮಕ್ಕಳಿಗೆ ದಿನ ಊಟದಲ್ಲಿ ತುಪ್ಪ ನೀಡುವುದರಿಂದ ಅವರ ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿ ಹೆಚ್ಚಾಗಲು ನೆರವಾಗುತ್ತದೆ. ದಿನ ನಿತ್ಯ ತುಪ್ಪ ಸೇವಿಸಿದ್ರೆ ಕ್ಯಾನ್ಸರ್ ಬರುವ ಪ್ರಮಾಣ ಕಡಿಮೆ ಆಗುತ್ತದೆ