Select Your Language

Notifications

webdunia
webdunia
webdunia
webdunia

ದಾಳಿಂಬೆ ಹಣ್ಣು ಮಾತ್ರವಲ್ಲ ಅದರ ಎಲೆಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ..

ದಾಳಿಂಬೆ ಹಣ್ಣು ಮಾತ್ರವಲ್ಲ ಅದರ ಎಲೆಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ..
ಬೆಂಗಳೂರು , ಮಂಗಳವಾರ, 21 ಸೆಪ್ಟಂಬರ್ 2021 (15:04 IST)
ದಾಳಿಂಬೆ ಹಣ್ಣುಗಳು ಪ್ರತಿಯೊಬ್ಬರಿಗೂ ಇಷ್ಟ. ಅದರ ಆರೋಗ್ಯ ಪ್ರಯೋಜನಗಳು ಸಹ ತಿಳಿದಿದೆ. ಇದರ ಉಪಯೋಗವನ್ನು ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ದಾಳಿಂಬೆ ಹಣ್ಣಿನಂತೆ ಅದರ ಹೂವು, ಕಾಂಡ ಹಾಗೂ ಎಲೆಗಳು ಕೂಡ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. 

ದಾಳಿಂಬೆ ಗಿಡದ ಎಲೆಗಳು ಚಿಕ್ಕದಾಗಿರುತ್ತವೆ  ಹಾಗೂ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ. ದಾಳಿಂಬೆ ಗಿಡದಿಂದ ಪಡೆದ ಪ್ರತಿಯೊಂದು ಭಾಗವನ್ನು ಔಷಧೀಯವಾಗಿ ಬಳಸಬಹುದು. ದಾಳಿಂಬೆ ಎಲೆಗಳನ್ನು ಕಾಮಾಲೆ, ಅತಿಸಾರ, ಹೊಟ್ಟೆ ನೋವು ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. 
ದಾಳಿಂಬೆ ಎಲೆಗಳು ನಿದ್ರಾಹೀನತೆಯನ್ನು ನಿವಾರಿಸಬಹುದು. ನಿಮಗೆ ನಿದ್ರೆಯ ಸಮಸ್ಯೆ ಇದ್ದಲ್ಲಿ ವಿಧಾನವನ್ನು ಬಳಸಿ.
ಮಾಡುವ ವಿಧಾನ: 3 ಗ್ರಾಂ ದಾಳಿಂಬೆ ಎಲೆಯನ್ನು ತೆಗೆದುಕೊಂಡು ತೊಳೆದು, ನಂತರ ಉಳಿದ ಅರ್ಧಕ್ಕೆ ಎರಡು ಕಪ್ ನೀರಿನಲ್ಲಿ ಕುದಿಸಿ. ಅದರ ನಂತರ, ನಿದ್ರೆ ಮಾಡುವ ಸಮಯದಲ್ಲಿ ಸೇವನೆ ಮಾಡಿ. ಇದು ನಿಮಗೆ ನಿದ್ರೆಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಬಳಕೆ ಮಾಡಿದರೆ ನಿಮ್ಮ ಸಮಸ್ಯೆಗೆ ಮುಕ್ತಿ ನೀಡುತ್ತದೆ.
ಹೊಟ್ಟೆ ನೋವನ್ನು ಸಹ ದಾಳಿಂಬೆ ಎಲೆ ಕಡಿಮೆ ಮಾಡುತ್ತದೆ. ನೀವು ದಾಳಿಂಬೆ ಎಲೆ ಚಹಾವನ್ನು ಸೇವಿಸುವುದು , ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು ಮತ್ತು ಹೊಟ್ಟೆ ನೋವನ್ನು  ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ದಾಳಿಂಬೆ ಎಲೆಗಳು ಅತಿಸಾರವನ್ನು ಸಹ ನಿವಾರಣೆ ಮಾಡುವ ಅಂಶಗಳನ್ನು ಹೊಂದಿದೆ. ದಾಳಿಂಬೆ ಎಲೆಗಳಲ್ಲಿನ ಬ್ಯಾಕ್ಟೀರಿಯಾ ವಿರೋಧಿ  ಅಂಶ ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.  ಅತಿಸಾರದಿಂದ ಮುಕ್ತಿ ಪಡೆಯಲು ನೀವು ಹಣ್ಣಿನ ರಸವನ್ನು ಸೇವಿಸಬಹುದು. ಹಾಗೆಯೇ  ದಾಳಿಂಬೆ ಎಲೆಯನ್ನು ಕುದಿಸಿ ಅದನ್ನು ಸೇವನೆ ಮಾಡುವುದು, ಭೇದಿ ಮತ್ತು ಜಠರಗರುಳಿನ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ.
ದಾಳಿಂಬೆ ಎಲೆಗಳು  ಜಾಂಡೀಸ್ ಲಕ್ಷಣಗಳನ್ನು ಸಹ ನಿವಾರಣೆ ಮಾಡುತ್ತದೆ.  ನೀವು ದಾಳಿಂಬೆಯ ಪುಡಿ ಎಲೆಗಳನ್ನು ಇದಕ್ಕೆ ಬಳಸಬಹುದು.  ಮಾಡುವ ವಿಧಾನ: 3 ದಾಳಿಂಬೆ ಎಲೆಗಳನ್ನು ನುಣ್ಣಗೆ ಪುಡಿ ಮಾಡಿ ಅದನ್ನು ನೀರಲ್ಲಿ ಹಾಕಿ ಕುದಿಸಿ, ಆರಿಸಿ ಕುಡಿಯಿರಿ. ಇದು ನಿಮಗೆ ಜಾಂಡೀಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
webdunia

ದಾಳಿಂಬೆ ಎಲೆ ಕೆಮ್ಮಿಗೆ ಕೂಡ  ಚಿಕಿತ್ಸೆ ನೀಡುತ್ತದೆ. ನಿಮಗೆ ಕೆಮ್ಮು ಸಮಸ್ಯೆ ಇದ್ದಲ್ಲಿ ಔಷಧವನ್ನು ಬಳಕೆ ಮಾಡಿ.
 ಔಷಧಿ  ತಯಾರಿಸುವ ವಿಧಾನ: ದಾಳಿಂಬೆಯ ಎಲೆಗಳನ್ನು ತೆಗೆದುಕೊಂಡು ಒಣಗಿಸಿ, ನಂತರ ನೀರಿಗೆ ಹಾಕಿ ಕುದಿಸಿ, ಅದಕ್ಕೆ ಕರಿಮೆಣಸು ಹಾಕಿ ಸರಿಯಾಗಿ ಕುದಿಸಿ, ಆರಿಸಿ ಕುಡಿಯಿರಿ.  ದಾಳಿಂಬೆ ಎಲೆಗಳು ಬಾಯಿ ಹುಣ್ಣುಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ.  ಹೆಚ್ಚು ತುಟಿ, ಬಾಯಿ ಅಥವಾ ನಾಲಿಗೆಯಲ್ಲಿ ಈ ಹುಣ್ಣು ಕಾಣಿಸಿಕೊಳ್ಳುತ್ತದೆ.  ಆ ಹುಣ್ಣುಗಳು ನೋವು ಉಂಟುಮಾಡುತ್ತದೆ. ಇದಕ್ಕೆ ಪರಿಹಾರ ಎಂದರೆ ದಾಳಿಂಬೆ ಎಲೆಯ ಕಷಾಯ ಕುಡಿಯಿರಿ.
ದಾಳಿಂಬೆ ಎಲೆಗಳು ಗುದನಾಳದ  ಸಮಸ್ಯೆಯನ್ನು ಸಹ ಪರಿಹರಿಸುತ್ತದೆ.   ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ದಾಳಿಂಬೆಯ ಎಲೆಗಳ ನೀರಿನಲ್ಲಿ ಹಾಕಿ  ಕಷಾಯ ತಯಾರಿಸಿ, ಇದನ್ನು ಆಲಂನೊಂದಿಗೆ ಬೆರೆಸಿ ಸೇವನೆ ಮಾಡಿ.
webdunia

ದಾಳಿಂಬೆ ಎಲೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ನೀವು  ಚಿಗುರು ಎಲೆಗಳನ್ನು ಸಲಾಡ್ ಆಗಿ ಬಳಸಬಹುದು. ದಾಳಿಂಬೆ ಎಲೆಗಳನ್ನು ಗಿಡಮೂಲಿಕೆ ಚಹಾ ಮಾಡುವುದು ಉತ್ತಮ ವಿಧಾನಗಳಲ್ಲಿ ಒಂದಾಗಿದೆ.
ತೊಳೆದ ಕೆಲವು ದಾಳಿಂಬೆ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ.  ಅದನ್ನು ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ. ಅದನ್ನು ಆರಿಸಿ ಸೇವಿಸಿ.   ನಿದ್ರೆಯ ಸಮಸ್ಯೆಗೆ , ಹೊಟ್ಟೆಯ ನೋವು ಹಾಗೂ ಜೀರ್ಣಕಾರಿ ಸಮಸ್ಯೆಗಳನ್ನು ಸರಾಗಗೊಳಿಸಲು ಮತ್ತು ದೇಹದ ಕೊಬ್ಬನ್ನು ಸುಡಲು ಮಲಗುವ ಮುನ್ನ ಇದನ್ನು ಪ್ರತಿದಿನ ಕುಡಿಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಹೊತ್ತಲ್ಲೇ ಮಕ್ಕಳಿಗೆ ಮತ್ತೊಂದು ಶಾಕ್!