Black Pepper Tea Benefits : ಮತ್ತೊಂದು ವಿಚಾರವೆಂದರೆ ಕಾಳು ಮೆಣಸಿನ ಚಹಾ ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ. ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇದರಲ್ಲಿದೆ.
ಶುಂಠಿ ಚಹಾ, ಲಿಂಬೆ ಚಹಾ, ಪುದೀನಾ ಚಹಾ ಹೀಗೆ ನಾನಾ ತರಹದ ಚಹಾಗಳಿವೆ ಇದರ ಸೇವನೆಯಿಂದ ಹಲವು ಪ್ರಯೋಜನಗಳು ಸಿಗುತ್ತದೆ. ಅದರಂತೆ ಕಾಳು ಮೆಣಸಿನ ಚಹಾದಲ್ಲೂ ಹಲವು ಪ್ರಯೋಜನ ಸಿಗುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ!
ಕಾಳು ಮೆಣಸಿನ ಚಹಾ ಮಾಡಿ ಕುಡಿಯುವುದರಿಂದ ಆರೋಗ್ಯದ ಮೇಲೆ ಹಲವು ಸಕಾರಾತ್ಮಕ ಪರಿಣಾಮ ಬೀರಲಿದೆ. ಅದರಲ್ಲೂ ತೂಕ ಇಳಿಸಲು ನೆರವಾಗುತ್ತದೆ. ಅಷ್ಟು ಮಾತ್ರವಲ್ಲದೆ, ಜೀರ್ಣಕ್ರಿಯೆ ಕೂಡ ಉತ್ತಮವಾಗುತ್ತದೆ. ಕಾಳು ಮೆಣಸಿಗೆ ಭಾರೀ ಬೇಡಿಕೆ ಇದೆ ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚಿನ ರೈತರು ಕಾಳು ಮೆಣಸನ್ನು ಬೆಳಸುತ್ತಾರೆ.
ಹಾಗಾಗಿ ಶೀತ, ಕಫವಾದರೆ ಕಾಳು ಮೆಣಸಿಗೆ ಸ್ಪಲ್ಪ ಜೇನು ತುಪ್ಪ ಸೇರಿಸಿ ಸೇವಿಸುದರ ಮೂಲಕ ಇಂತಹ ಸಮಸ್ಯೆಗೆ ಫುಲ್ಸ್ಟಾಪ್ ನೀಡಬಹುದಾಗಿದೆ. ಮತ್ತೊಂದು ವಿಚಾರವೆಂದರೆ ಕಾಳು ಮೆಣಸಿನ ಚಹಾ ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ. ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇದರಲ್ಲಿದೆ.
ಕಾಳು ಮೆಣಸಿನ ಚಹಾ ಕುಡಿಯುವುದರಿಂದ ಉರಿಯೂತ ನಿವಾರಿಸಬಹುದಾಗಿದೆ. ಅಷ್ಟೇ ಏಕೆ ಅಲರ್ಜಿ ಮತ್ತು ಅಸ್ತಮಾ ದೂರವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಳು ಮೆಣಸು ನಿಯಂತ್ರಿಸುತ್ತಂತೆ. ಹಾಗಾಗಿ ಇದನ್ನು ಚಹಾ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನ ಸಿಗಲಿದೆ.