Select Your Language

Notifications

webdunia
webdunia
webdunia
webdunia

ಆರೋಗ್ಯಕ್ಕೆ ಕಪ್ಪು ದ್ರಾಕ್ಷಿ ಒಳ್ಳೆಯದಾ? ಹಳದಿ ದ್ರಾಕ್ಷಿ ತಿನ್ನಬೇಕಾ?

ಆರೋಗ್ಯಕ್ಕೆ ಕಪ್ಪು ದ್ರಾಕ್ಷಿ ಒಳ್ಳೆಯದಾ? ಹಳದಿ ದ್ರಾಕ್ಷಿ ತಿನ್ನಬೇಕಾ?
ಬೆಂಗಳೂರು , ಬುಧವಾರ, 22 ಸೆಪ್ಟಂಬರ್ 2021 (09:07 IST)
ಹಳದಿ ಒಣದ್ರಾಕ್ಷಿಯಲ್ಲಿ ಹೆಚ್ಚು ಕ್ಯಾಲೋರಿಗಳು ಇರುತ್ತವೆ. ಅದೇ ರೀತಿ ಕಪ್ಪು ಒಣ ದ್ರಾಕ್ಷಿಯಲ್ಲಿ ಸ್ವಲ್ಪ ಪ್ರಮಾಣದ ಸೋಡಿಯಂ ಹಾಗೂ ಫೈಬರ್ ಅಂಶ ಇರುತ್ತದೆ. ಈ ಎರಡು ದ್ರಾಕ್ಷಿಗಳಲ್ಲಿ ಯಾವ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂಬ ಗೊಂದಲದಲ್ಲಿ ಅನೇಕ ಜನರಿದ್ದಾರೆ.

ಒಣದ್ರಾಕ್ಷಿ ತಿನ್ನುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒಣದ್ರಾಕ್ಷಿಯಲ್ಲಿ ಕಪ್ಪು ಒಣದ್ರಾಕ್ಷಿ ಮತ್ತು ಹಳದಿ ಒಣದ್ರಾಕ್ಷಿ ಎಂಬ ಎರಡು ಬಗೆಯನ್ನು ಕಾಣುತ್ತೇವೆ. ಈ ಎರಡೂ ದ್ರಾಕ್ಷಿಯನ್ನು ತಿನ್ನುವುದರಿಂದ ಯಥೇಚ್ಛ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ದ್ರಾಕ್ಷಿ ತಿನ್ನುವುದರಿಂದ ಮಲಬದ್ಧತೆ, ಆಮ್ಲೀಯತೆ, ರಕ್ತ ಹೀನತೆ, ಜ್ವರ ಮತ್ತು ಲೈಂಗಿಕ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಹಳದಿ ಒಣದ್ರಾಕ್ಷಿಯಲ್ಲಿ ಹೆಚ್ಚು ಕ್ಯಾಲೋರಿಗಳು ಇರುತ್ತವೆ. ಅದೇ ರೀತಿ ಕಪ್ಪು ಒಣ ದ್ರಾಕ್ಷಿಯಲ್ಲಿ ಸ್ವಲ್ಪ ಪ್ರಮಾಣದ ಸೋಡಿಯಂ ಹಾಗೂ ಫೈಬರ್ ಅಂಶ ಇರುತ್ತದೆ. ಈ ಎರಡು ದ್ರಾಕ್ಷಿಗಳಲ್ಲಿ ಯಾವ ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂಬ ಗೊಂದಲದಲ್ಲಿ ಅನೇಕ ಜನರಿದ್ದಾರೆ. ಈ ಲೇಖನದಲ್ಲಿ ಯಾವ ದ್ರಾಕ್ಷಿ ತಿಂದರೆ ಯಾವ ಲಾಭ ಪಡೆಯಬಹುದು ಎಂದು ತಿಳಿಸಿಕೊಟ್ಟಿದ್ದೇವೆ.
ಕಪ್ಪು ಒಣದ್ರಾಕ್ಷಿ ಮತ್ತು ಹಳದಿ ಒಣದ್ರಾಕ್ಷಿ ಎರಡರಲ್ಲೂ ಆರೋಗ್ಯ ಮತ್ತು ಪೋಷಣೆ ಒಂದೇ ಆಗಿರುತ್ತದೆ. ಆದರೆ ಇವೆರಡೂ ಕ್ಯಾಲೋರಿಗಳಲ್ಲಿ ಮಾತ್ರ ಭಿನ್ನವಾಗಿವೆ. ಅಂದರೆ ಕಾಲು ಕಪ್ ಹಳದಿ ದ್ರಾಕ್ಷಿಯಲ್ಲಿ 130 ಕ್ಯಾಲೋರಿಗಳಿವೆ. ಕಪ್ಪು ದ್ರಾಕ್ಷಿಯಲ್ಲಿ 120 ಕ್ಯಾಲೋರಿಗಳಿವೆ.
ಆದಾಗ್ಯೂ ಕಪ್ಪು ಒಣ ದ್ರಾಕ್ಷಿಯನ್ನು ತಜ್ಞರು ಮತ್ತು ವೈದ್ಯರು ಹೆಚ್ಚು ಶಿಫಾರಸು ಮಾಡುತ್ತಾರೆ. ಏಕೆಂದರೆ ಕಪ್ಪು ದ್ರಾಕ್ಷಿಯು ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಣ್ಣಿನ ಆರೋಗ್ಯ, ಹಲ್ಲಿನ ಆರೈಕೆ, ಮೂಳೆ ಆರೋಗ್ಯ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಪ್ಪು ದ್ರಾಕ್ಷಿಯನ್ನು ತಿನ್ನಬಹುದು. ಕಪ್ಪು ಒಣ ದ್ರಾಕ್ಷಿಯನ್ನು ರಾತ್ರಿ ಮಲಗುವ ಮುನ್ನ ನೆನೆಸಿಟ್ಟು, ಮರುದಿನ ಬೆಳಗ್ಗೆ ತಿನ್ನುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಒಣಗಿದ ಕಪ್ಪು ದ್ರಾಕ್ಷಿಯಲ್ಲಿ ಮೆಗ್ನೀಶಿಯಂ ಹೇರಳವಾಗಿದ್ದು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. ಜೊತೆಗೆ ಈ ದ್ರಾಕ್ಷಿಯಲ್ಲಿ ಹೆಚ್ಚಿನ ಫೈಬರ್ ಅಂಶವೂ ಇದೆ. ನಮ್ಮ ದೇಹದ ರಕ್ತವನ್ನು ಶುದ್ದೀಕರಿಸುವಲ್ಲಿ ಕಪ್ಪು ದ್ರಾಕ್ಷಿಯ ಮಹತ್ವ ಹೆಚ್ಚಿನದಾಗಿದೆ.
ಇದು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚು ಮಾಡುವುದರ ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ನೋಡಿಕೊಂಡು ಅನೀಮಿಯಾ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿರುವುರಿಂದ ಚರ್ಮದ ಮಂದವನ್ನು ಕಡಿಮೆ ಮಾಡುತ್ತದೆ ಹಾಗೂ ಕಾಂತಿಯನ್ನು ಹೆಚ್ಚಿಸುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನ ತಿಳಿಯಿರಿ