ದೇಹವನ್ನು ಸ್ವಚ್ಛಗೊಳಿಸಲು ಮತ್ತು ಉಲ್ಲಾಸವನ್ನು ಅನುಭವಿಸಲು ಸ್ನಾನ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಹಿಂದಿನ ಕಾಲದಲ್ಲಿ ರಾಜ, ರಾಣಿಯರು ಹಾಲಿನಿಂದ ಸ್ನಾನ ಮಾಡುತ್ತಿದ್ದರು ಎಂದು ಹೇಳಿರುವುದು ಕೇಳಿರಬಹುದು.
ಹೌದು ಆ ರಾಜ ಮತ್ತು ರಾಣಿಯಂತೆ, ನೀವು ಕೂಡ ಹಾಲಿನಿಂದ ಸ್ನಾನ ಮಾಡಬಹುದು. ಹಾಲಿನ ಸ್ನಾನ ಎಂದರೆ ಬಕೆಟ್ ತುಂಬಾ ಹಾಲು ತೆಗೆದುಕೊಂಡು ಸ್ನಾನ ಮಾಡುವುದಲ್ಲ. ಒಂದು ಬಕೆಟ್ ನೀರಿಗೆ ಒಂದು ಲೋಟದಷ್ಟು ಹಾಲನ್ನು ಬೆರೆಸಿದರೆ ಸಾಕು. ಈ ನೀರಿನಿಂದ ಸ್ನಾನ ಮಾಡುವುದರಿಂದ ಅದ್ಬುತ ಲಾಭಗಳು ಸಿಗಲಿವೆ . ಈ ಎಲ್ಲಾ ಪ್ರಯೋಜನಗಳನ್ನು ನೀವೂ ಪಡೆಯಬೇಕಾದರೆ ನೀವು ಕೂಡಾ ಸ್ನಾನದ ನೀರಿಗೆ ಹಾಲು ಬೆರೆಸಿ ನೋಡಿ.
ಹಾಲು ಬೆರೆಸಿದ ನೀರಿನಿಂದ ಸ್ನಾನ ಮಾಡಿದರೆ ಸಿಗುವ ಪ್ರಯೋಜನಗಳು :
ಹೆಲ್ತ್ ಲೈನ್ ಪ್ರಕಾರ ನೀವು ಸ್ನಾನದ ನೀರಿಗೆ ಒಂದು ಲೋಟ ಹಾಲು ಬೆರೆಸಬೇಕು. ಇದಕ್ಕಾಗಿ ಹಾಲು, ಹಾಲಿನ್ ಪೌಡರ್, ಮೇಕೆ ಹಾಲು, ತೆಂಗಿನ ಹಾಲು, ಸೋಯಾ ಹಾಲು ಹೀಗೆ ಯಾವ ಹಾಲನ್ನಾದರೂ ತೆಗೆದುಕೊಳ್ಳಬಹುದು.
1. ಹಾಲಿನಲ್ಲಿರುವ ಪ್ರೋಟೀನ್ ಗಳು, ಕೊಬ್ಬುಗಳು, ಜೀವಸತ್ವಗಳು, ಖನಿಜಗಳು ಮತ್ತು ಲ್ಯಾಕ್ಟಿಕ್ ಆಮ್ಲವು ಒಣ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಸತ್ತ ಜೀವಕೋಶಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
2. ಒಂದು ಅಧ್ಯಯನದ ಪ್ರಕಾರ, ಹಾಲಿನ ಸ್ನಾನವು ಎಕ್ಸಿಮಾದಂತಹ ಚರ್ಮದ ಸೋಂಕುಗಳಿಂದ ಪರಿಹಾರವನ್ನು ನೀಡುತ್ತದೆ.
3.ಹೆಲ್ತ್ಲೈನ್ ಪ್ರಕಾರ, ಸ್ನಾನದ ನೀರಿಗೆ ಹಾಲನ್ನು ಸೇರಿಸುವುದರಿಂದ ಸೋರಿಯಾಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು. ಈ ರೋಗಲಕ್ಷಣಗಳಲ್ಲಿ ತುರಿಕೆ, ಸೇರಿದಂತೆ ಚರ್ಮದ ಸಮಸ್ಯೆಗಳನ್ನು ಕಾಣಬಹುದು.
4. ಇನ್ನು ಯಾವುದಾದರೂ ವಿಷಪೂರಿತ ಸಸ್ಯಕ್ಕೆ ಒಡ್ಡಿಕೊಂಡಿದ್ದು, ತುರಿಕೆ, ಕೆಂಪು ಅಥವಾ ಊತವನ್ನು ಉಂಟುಮಾಡುತ್ತಿದ್ದರೆ, ಹಾಲಿನ ಸ್ನಾನವು ಪರಿಹಾರವನ್ನು ನೀಡಬಹುದು.
5. ಹಾಲಿನಲ್ಲಿರುವ ವಿಟಮಿನ್ ಎ, ವಿಟಮಿನ್ ಡಿ, ಪ್ರೋಟೀನ್, ಕೊಬ್ಬು, ಅಮೈನೋ ಆಮ್ಲಗಳು ಬಿಸಿಲಿನಿಂದ ಬಾಧಿತವಾದ ಚರ್ಮವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
ಗಮನಿಸಿ- ಆದಾಗ್ಯೂ, ಸೂಕ್ಷ್ಮ ಚರ್ಮ , ಜ್ವರ ಇರುವವರು ಮತ್ತು ಗರ್ಭಿಣಿಯರು ಈ ಹಾಲಿನ ಸ್ನಾನ ಮಾಡಬೇಡಿ ಅಥವಾ ಮೊದಲು ವೈದ್ಯರನ್ನು ಸಂಪರ್ಕಿಸಿ. ಸ್ನಾನ ಮಾಡುವಾಗ ನಿಮಗೆ ತಲೆಸುತ್ತಿದಂತೆ ಅನಿಸಿದರೆ ಸ್ನಾನ ಮಾಡುವುದನ್ನು ನಿಲ್ಲಿಸಿ ಮತ್ತು ಈ ನೀರನ್ನು ಎಂದಿಗೂ ಕುಡಿಯಬೇಡಿ.