Select Your Language

Notifications

webdunia
webdunia
webdunia
webdunia

ಹೊಟ್ಟೆ ಹುಳು ಸಮಸ್ಯೆಗೆ ಪಪ್ಪಾಯಿ ಬೀಜ ಮದ್ದು...? ತಜ್ಞರು ಹೇಳೋದೇನು..?

ಹೊಟ್ಟೆ ಹುಳು ಸಮಸ್ಯೆಗೆ ಪಪ್ಪಾಯಿ ಬೀಜ ಮದ್ದು...? ತಜ್ಞರು ಹೇಳೋದೇನು..?
ಬೆಂಗಳೂರು , ಶುಕ್ರವಾರ, 17 ಸೆಪ್ಟಂಬರ್ 2021 (13:16 IST)
ಸಣ್ಣ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ಮನೆ ಮದ್ದು ಮಾಡುವುದು ಸಾಮಾನ್ಯ ಸಂಗತಿ. ಅಮೆರಿಕಾದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಪಪ್ಪಾಯಿ ಬೀಜ, ಹೊಟ್ಟೆ ಹುಳು ಸಮಸ್ಯೆಗೆ ಪರಿಹಾರ ಎನ್ನಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದ್ರ ವಿಡಿಯೋಗಳನ್ನು ಜನರು ಹಂಚಿಕೊಳ್ತಿದ್ದಾರೆ. ಇದರ ಬಗ್ಗೆ ತಜ್ಞರು ಈಗ ಮಾಹಿತಿ ನೀಡಿದ್ದಾರೆ.

2007ರಲ್ಲಿ ನೈಜೀರಿಯಾದಲ್ಲಿ 60 ಮಕ್ಕಳ ಮೇಲೆ ಅಧ್ಯಯನ ನಡೆದಿತ್ತು. ಪಪ್ಪಾಯಿ ಬೀಜ, ಹೊಟ್ಟೆ ಹುಳು ಸಾಯಿಸುತ್ತದೆ ಎಂಬುದಾಗಿ ವರದಿಯಲ್ಲಿ ಹೇಳಲಾಗಿತ್ತು. ಮಲದ ಮೂಲಕ ಹುಳ ಹೊರಗೆ ಬಂದಿತ್ತು. ಆದ್ರೆ ಕ್ಲೀವ್ಲ್ಯಾಂಡ್ ಕ್ಲಿನಿಕ್ನ ಎಂಡಿ, ಕ್ರಿಸ್ಟೀನ್ ಲೀ ಪ್ರಕಾರ, ಕಡಿಮೆ ಪ್ರಮಾಣದಲ್ಲಿ ನಡೆದ ಅಧ್ಯಯನವನ್ನು ನಂಬಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದಿದ್ದಾರೆ.
ಪಪ್ಪಾಯ ಬೀಜದಲ್ಲಿ ಸೈನೈಡ್ ಇರುತ್ತದೆ. ಇದು ಹಾನಿಕಾರಕ ನೈಸರ್ಗಿಕ ರಾಸಾಯನಿಕವಾಗಿದ್ದು, ಹೆಚ್ಚು ಸೇವನೆಯಿಂದ ಆರೋಗ್ಯ ಹದಗೆಡುವ ಸಾಧ್ಯತೆಯಿದೆ.
ಅತಿಸಾರ, ವಾಕರಿಕೆ, ಹಠಾತ್ ತೂಕ ಇಳಿಕೆ, ರಕ್ತಸ್ರಾವ, ರಕ್ತಹೀನತೆ ಮತ್ತು ಗ್ಯಾಸ್ ಇವೆಲ್ಲವೂ ಹೊಟ್ಟೆಯ ಹುಳದ ಸಂಕೇತವಾಗಿರುತ್ತದೆ. ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ತಿದ್ದಂತೆ ಗೂಗಲ್ ಸರ್ಚ್ ಮಾಡುವುದನ್ನು ಬಿಟ್ಟು, ವೈದ್ಯರನ್ನು ಭೇಟಿಯಾಗಿ ಎಂದು ಲೀ ಸಲಹೆ ನೀಡಿದ್ದಾರೆ. ಹೊಟ್ಟೆ ಹುಳು ಕೊಲ್ಲುತ್ತದೆ ಎಂಬ ಕಾರಣವಿಟ್ಟುಕೊಂಡು ಯಾವುದೇ ಕಾರಣಕ್ಕೂ ಪಪ್ಪಾಯಿ ಬೀಜ ಸೇವನೆ ಮಾಡಬೇಡಿ. ಇದಕ್ಕೆ ಯಾವುದೇ ವೈಜ್ಞಾನಿಕ ಕಾರಣವಿಲ್ಲವೆಂದು ಲೀ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಥೈರಾಯ್ಡ್ ಸಮಸ್ಯೆ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ