Select Your Language

Notifications

webdunia
webdunia
webdunia
webdunia

ತ್ವಚೆಯ ಆರೈಕೆಯಿಂದ ಹೃದಯದ ಆರೋಗ್ಯದವರೆಗೆ ರೆಡ್ ವೈನ್ ಪ್ರಯೋಜನಗಳು ಒಂದೆರೆಡಲ್ಲ..

ತ್ವಚೆಯ ಆರೈಕೆಯಿಂದ ಹೃದಯದ ಆರೋಗ್ಯದವರೆಗೆ ರೆಡ್ ವೈನ್ ಪ್ರಯೋಜನಗಳು ಒಂದೆರೆಡಲ್ಲ..
ಬೆಂಗಳೂರು , ಗುರುವಾರ, 16 ಸೆಪ್ಟಂಬರ್ 2021 (12:14 IST)
ರೆಡ್ ವೈನ್ ಎಂದರೆ ಹಲವಾರು ಜನರಿಗೆ ಬಹಳ ಇಷ್ಟ. ಇದನ್ನು ನಿಯಮಿತವಾಗಿ ಸೇವನೆ ಕೂಡ ಮಾಡುತ್ತಾರೆ. ಇದನ್ನು ಕೇವಲ ಒಂದು ಪಾನೀಯ ಎಂದು ತಿಳಿದಿದ್ದರೆ ಅದು ತಪ್ಪು. ಏಕೆಂದರೆ ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿರುತ್ತದೆ.

ಇದು ಔಷಧಿಗಳ ದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಹೃದಯರಕ್ತನಾಳದ ಸಮಸ್ಯೆ, ಮಧುಮೇಹ, ಮೆಟಾಬಾಲಿಕ್ ಸಿಂಡ್ರೋಮ್ ಹೀಗೆ ಹಲವಾರು ರೋಗಗಳಿಗೆ ಇದು ಔಷಧಿ ಎನ್ನಲಾಗುತ್ತದೆ.
 ರೆಡ್  ವೈನ್ ಅನ್ನು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ, ಮತ್ತು ದ್ರಾಕ್ಷಿಯಲ್ಲಿ ಹಲವಾರು  ಆ್ಯಂಟಿ ಆಕ್ಸಿಡೆಂಟ್ಗಳು ಹೆಚ್ಚಿದೆ . ಇವುಗಳಲ್ಲಿ ಕೆಲವು ಕ್ಯಾಟೆಚಿನ್ಸ್, ರೆಸ್ವೆರಾಟ್ರೊಲ್, ಎಪಿಕಟೆಚಿನ್ ಮತ್ತು ಪ್ರೊಅಂಟೊಸಯಾನಿಡಿನ್ಸ್. ಇದೆ.
 
webdunia

ರೆಡ್ ವೈನ್ನಲ್ಲಿರುವ ರೆಸ್ವೆರಾಟ್ರೊಲ್ ಜೀವಿತಾವಧಿಯನ್ನು 60%ರಷ್ಟು ಹೆಚ್ಚಿಸಬಹುದು ಎಂದು ಸಂಶೋಧನೆ  ಸಾಬೀತು ಮಾಡಿದೆ. ಕೆಂಪು ವೈನ್ನಲ್ಲಿರುವ  ಆ್ಯಂಟಿ ಆಕ್ಸಿಡೆಂಟ್  ಹೆಚ್ಚು           ಶಕ್ತಿಯನ್ನು ಒದಗಿಸುತ್ತದೆ. ರೆಡ್ ವೈನ್ ಕುಡಿಯುವವರು ವೋಡ್ಕಾ ಅಥವಾ ಬಿಯರ್  ಕುಡಿಯುವವರಿಗಿಂತ 34% ಕಡಿಮೆ ಮರಣ ಪ್ರಮಾಣವನ್ನು ಹೊಂದಿದ್ದಾರೆ.
webdunia

ರೆಡ್ ಸೇವನೆ ಕೂದಲು ಉದುರುವುದನ್ನ ಕಡಿಮೆ ಮಾಡುತ್ತದೆ. ಕೂದಲಿನ ಬುಡಗಳನ್ನು ಗಟ್ಟಿಗೊಳಿಸಿ, ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಅಲ್ಲದೇ ಕೂದಲು ತುಂಡಾಗುವ ಸಮಸ್ಯೆ ಇದ್ದರೆ, ಅದಕ್ಕೂ ಪರಿಹಾರ ನೀಡುತ್ತದೆ.
ರೆಡ್ ವೈನ್ ನಲ್ಲಿರುವ   ಆ್ಯಂಟಿ ಆಕ್ಸಿಡೆಂಟ್    ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್"  ಮಟ್ಟವನ್ನು ಹೆಚ್ಚು ಮಾಡುತ್ತದೆ.. ಇದರಲ್ಲಿರುವ  ಪಾಲಿಫಿನಾಲ್ಗಳು, ವಿಶೇಷವಾಗಿ ರೆಸ್ವೆರಾಟ್ರಾಲ್, ನಿಮ್ಮ ಹೃದಯದಲ್ಲಿರುವ ರಕ್ತನಾಳಗಳ ಒಳಪದರಗಳನ್ನು ರಕ್ಷಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ರೆಡ್ ವೈನ್ ನಲ್ಲಿರುವ ಟ್ಯಾನಿನ್ ಗಳು ಹೃದಯ ರೋಗಗಳು ಮತ್ತು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೊದಲೇ ಹೇಳಿದಂತೆ ಇದು ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮುಖ್ಯವಾಗಿ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡಲು ಇದು ಸಹಾಯ ಮಾಡುತ್ತದೆ. ತಲೆ ಸ್ನಾನ ಮಾಡುವ ಮುನ್ನ ನೆತ್ತಿಯ ಮೇಲೆ ಸ್ವಲ್ಪ ವೈನ್ ಹಚ್ಚುವುದು ಉತ್ತಮ ಪ್ರಯೋಜನ ನೀಡುತ್ತದೆ.
ತ್ವಚೆಯ ಹಲವಾರು ಸಮಸ್ಯೆಗಳಿಗೆ ವೈನ್ ಉತ್ತಮ ಔಷಧ. ನಿಮಗೆ ಹೊಳೆಯುವ ತ್ವಚೆ ಬೇಕು ಎಂದಿದ್ದರೆ, ಪ್ರತಿದಿನ ರಾತ್ರಿ ಮಲಗುವ ಮುನ್ನ ಸ್ವಲ್ಪ ವೈನ್ ಹಚ್ಚಿ ಬೆಳಗ್ಗೆ ತೊಳೆಯುವುದು ಪ್ರಯೋಜನವನ್ನು ನೀಡುತ್ತದೆ.
ಇದು ಉತ್ತಮ ಕ್ಲೆನ್ಸರ್   ಆಗಿ ಕಾರ್ಯನಿರ್ವಹಿಸುತ್ತದೆ. ಎರಡು ಟೇಬಲ್ ಚಮಚ ವೈನ್ ಅನ್ನು ಒಂದು ಟೇಬಲ್ ಸ್ಪೂನ್ ನಿಂಬೆ ರಸದೊಂದಿಗೆ ಬೆರೆಸಿ.  ಅದನ್ನು ಮುಖಕ್ಕೆ ಹತ್ತಿಯಿಂದ  ಹಚ್ಚಿ . ಇದನ್ನು ನಿಯಮಿತವಾಗಿ ಮಾಡುವುದು ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಇದು ಚರ್ಮದ ಆರೋಗ್ಯಕ್ಕೆ  ಅತ್ಯುತ್ತಮವಾದ ನೈಸರ್ಗಿಕ   ಟೋನರ್ ಎಂಬುದು ಸಾಬೀತಾಗಿದೆ. ಅಲ್ಲದೇ ತ್ವಚೆಯ ಹಲವಾರು ಸಮಸ್ಯೆಗಳಿಗೆ ಇದು ಪರಿಹಾರ ನೀಡುತ್ತದೆ. ಒಂದು ಹತ್ತಿಯ ತುಂಡನ್ನು ತೆಗೆದುಕೊಂಡು ಅದರ  ಮೇಲೆ ಸ್ವಲ್ಪ ವೈನ್ ಹಾಕಿ ಅದರಿಂದ ಪ್ರತಿದಿನವೂ ಮುಖವನ್ನು ಸ್ವಚ್ಛಗೊಳಿಸಿ.. ಇದು ತ್ವಚೆಯ ಅಂದ ಹೆಚ್ಚಿಸಲು ಸಹಾಯ ಮಾಡುತ್ತದೆ.
webdunia

ಪ್ರತಿ ಹೆಣ್ಣು ಮಕ್ಕಳ ಪ್ರಮುಖ ಸಮಸ್ಯೆ ಮುಖದಲ್ಲಿನ ಮೊದವಡಗಳು. ವೈನ್ನಲ್ಲಿ ಮುಖವನ್ನು ಸ್ವಚ್ಛ ಮಾಡುವುದರಿಂದ ಅಥವಾ ಅದನ್ನು ಹಚ್ಚಿ ರಾತ್ರಿ ಮಲಗುವುದರಿಂದ ಮೊಡವೆಗಳಿಂದ ಮುಕ್ತಿ ಪಡೆಯಬಹುದು.
ರೆಡ್ ವೈನ್ನ ಮತ್ತೊಂದು ಮುಖ್ಯ ಪ್ರಯೋಜನವೆಂದರೆ ಒಳ್ಲೆಯ ನಿದ್ರೆಗೆ ಕಾರಣವಾಗುತ್ತದೆ. ನಿಮಗೆ ನಿದ್ದೆಯ ಸಮಸ್ಯೆಯಿದ್ದಲ್ಲಿ ರಾತ್ರಿ ಮಲಗುವ 1 ಗಂಟೆಗೂ ಮುನ್ನ 1 ಗ್ಲಾಸ್ ವೈನ್ ಸೇವನೆ ನಿದ್ರೆಯ ಸಮಸ್ಯೆಯನ್ನು ಹೋಗಲಾಡಿಸಿ, ಪರಿಹಾರ ನೀಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪರೀಕ್ಷೆಗೆ ಇನ್ನು ಒಂದೇ ತಿಂಗಳು ಬಾಕಿ, ಕೊನೆ ಹಂತದ ತಯಾರಿಗೆ ಗೆದ್ದವರು ಹೇಳಿದ ಈ ಟಿಪ್ಸ್ ಫಾಲೋ ಮಾಡಿ!