Publish Date: Fri, 09 Jan 2026 (09:58 IST)
Updated Date: Fri, 09 Jan 2026 (11:31 IST)
ಮುಂಬೈ: ಮಹಿಳೆಯರ ಐಪಿಎಲ್ ಎಂದೇ ಜನಜನಿತವಾಗಿರುವ ಡಬ್ಲ್ಯುಪಿಎಲ್ ಟೂರ್ನಿ ಇಂದಿನಿಂದ ಶುರುವಾಗಲಿದೆ. ಇಂದು ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಎಷ್ಟೊತ್ತಿಗೆ ಆರಂಭವಾಗಲಿದೆ ಇಲ್ಲಿದೆ ವಿವರ.
ಮೊದಲ ಪಂದ್ಯದಲ್ಲೇ ಸ್ಮೃತಿ ಮಂಧಾನ ನೇತೃತ್ವದ ಆರ್ ಸಿಬಿ ಮತ್ತು ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗುತ್ತಿದೆ. ಪುರುಷರ ಕ್ರಿಕೆಟ್ ನಂತೆ ಮಹಿಳೆಯರ ಕ್ರಿಕೆಟ್ ನಲ್ಲೂ ಆರ್ ಸಿಬಿ ಮತ್ತು ಮುಂಬೈ ಪಂದ್ಯವೆಂದರೆ ಅದೇ ರೋಚಕತೆಯಿರುತ್ತದೆ.
ಇದುವರೆಗೆ ನಡೆದ ಎಲ್ಲಾ ಡಬ್ಲ್ಯುಪಿಎಲ್ ಆವೃತ್ತಿಗಳಲ್ಲಿ ಮುಂಬೈ ತಂಡ ಪ್ರಾಬಲ್ಯ ಮೆರೆದಿದೆ. 2024 ರ ಡಬ್ಲ್ಯುಪಿಎಲ್ ನಲ್ಲಿ ಮಾತ್ರ ಮುಂಬೈ ಕೊನೆಯ ಘಟ್ಟದಲ್ಲಿ ಜಾರಿ ಬಿದ್ದಿದ್ದು ಬಿಟ್ಟರೆ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಆಗಿ ಹರ್ಮನ್ ಪ್ರೀತ್ ಕೌರ್ ಪಡೆ ಪ್ರಬಲ ತಂಡವೆನಿಸಿಕೊಂಡಿದೆ. ಆರ್ ಸಿಬಿ 2024 ರಲ್ಲಿ ಚಾಂಪಿಯನ್ ಆಗಿದ್ದರೂ ಕಳೆದ ಆವೃತ್ತಿಯಲ್ಲಿ ಕೊಂಚ ಮಂಕಾಗಿತ್ತು. ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಅದರಲ್ಲೂ ವಿಶೇಷವಾಗಿ ತವರಿನಲ್ಲಿ ನಡೆದ ಪಂದ್ಯಗಳೆಲ್ಲವನ್ನೂ ಸೋತಿತ್ತು. ಆದರೆ ಈ ಬಾರಿ ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿಲ್ಲ. ಮುಂಬೈ ಒಂದು ರೀತಿ ಸ್ಮೃತಿ ಮಂಧಾನ ಪಡೆಗೂ ಲಕ್ಕೀ ಮೈದಾನ. ಹೀಗಾಗಿ ಇಲ್ಲಿ ಗೆಲುವು ನಿರೀಕ್ಷಿಸಲಾಗಿದೆ. ಈ ಬಾರಿ ಎಲ್ಲಿಸ್ ಪೆರ್ರಿ ಇಲ್ಲದೇ ಇರುವುದು ತಂಡಕ್ಕೆ ಹೊಡೆತವಾಗಲಿದೆ. ಹಾಗಿದ್ದರೂ ತಂಡ ಸಮತೋಲಿತವಾಗಿದ್ದು ಗೆಲ್ಲುವ ವಿಶ್ವಾಸ ಆರ್ ಸಿಬಿ ನಾಯಕಿಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದ್ದು ಜಿಯೋ ಹಾಟ್ ಸ್ಟಾರ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.
Krishnaveni K
Publish Date: Fri, 09 Jan 2026 (09:58 IST)
Updated Date: Fri, 09 Jan 2026 (11:31 IST)