Select Your Language

Notifications

webdunia
webdunia
webdunia
webdunia

ಮದುವೆ ಬ್ರೇಕಪ್ ಬಳಿಕ ಸ್ಮೃತಿ ಮಂಧಾನ ವರ್ತನೆಯೇ ಬದಲಾಯ್ತು Video

Smriti Mandhana
Photo Credit: X
ಮುಂಬೈ: ಪಾಲಾಶ್ ಮುಚ್ಚಲ್ ಜೊತೆ ಮದುವೆ ಬ್ರೇಕಪ್ ಆದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ವರ್ತನೆಯೇ ಬದಲಾಗಿದೆ.

ಮದುವೆ ಬ್ರೇಕಪ್, ತಂದೆಯ ಅನಾರೋಗ್ಯದಿಂದ ಕೆಲವು ದಿನ ಕುಗ್ಗಿ ಹೋಗಿದ್ದ ಸ್ಮೃತಿ ಮಂಧಾನ ಈಗಷ್ಟೇ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಮದುವೆ ಮುರಿದುಕೊಂಡ ಬಳಿಕ ಅವರು ಹೆಚ್ಚ ದೈವ ಭಕ್ತರಾಗಿದ್ದಾರೇನೋ ಅನಿಸುತ್ತಿದೆ.

ಹೊಸ ವರ್ಷದ ಸಂದರ್ಭದಲ್ಲಿ ಕಳೆದ ವರ್ಷದ ಕ್ಷಣಗಳನ್ನು ರಿಕ್ಯಾಪ್ ವಿಡಿಯೋ ಹಂಚಿಕೊಂಡಿದ್ದ ಸ್ಮೃತಿ ಮಂಧಾನ ಕೊನೆಯಲ್ಲಿ ಭಗವದ್ಗೀತೆಯ ಸಾಲೊಂದನ್ನು ಹಾಕಿದ್ದರು. ಯಾವತ್ತೂ ನಾನು ಪ್ರಾಕ್ಟಿಕಲ್ ವ್ಯಕ್ತಿ ಎನ್ನುತ್ತಿದ್ದ ಸ್ಮೃತಿ ಮಂಧಾನ ಇತ್ತೀಚೆಗೆ ಮೂರು ಪ್ರಮುಖ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದಾರೆ.

ಶ್ರೀಲಂಕಾ ವಿರುದ್ಧ ಟಿ20 ಸರಣಿ ನಡುವೆ ವಿಶಾಖಪಟ್ಟಣದಲ್ಲಿದ್ದಾಗ ಸ್ಮೃತಿ ಮಂಧಾನ ಅಲ್ಲಿನ ವರಾಹ ಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ತಿರುವನಂತಪುರಂಗೆ ಬಂದಾಗ ಪಂಚೆ ಕಟ್ಟಿಕೊಂಡು ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದ್ದರು.

ಇದೀಗ ನಿನ್ನೆ ಹೊಸ ವರ್ಷದ ಸಂದರ್ಭದಲ್ಲಿ ತಮ್ಮ ತಂಡದ ಸಹ ಆಟಗಾರ್ತಿಯರಾದ ಶಫಾಲಿ ವರ್ಮ, ರೇಣುಕಾಸಿಂಗ್, ಸ್ನೇಹ ರಾಣ ಜೊತೆ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಜೀವನದಲ್ಲಿ ಆದ ಏರಿಳಿತಗಳ ಬಳಿಕ ಪಕ್ಕಾ ಪ್ರಾಕ್ಟಿಕಲ್ ಆಗಿದ್ದ ಸ್ಮೃತಿ ಮಂಧಾನ ಈಗ ಪಕ್ಕಾ ದೈವ ಭಕ್ತೆಯಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ