Publish Date: Thu, 08 Jan 2026 (13:11 IST)
Updated Date: Thu, 08 Jan 2026 (13:13 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ತಿಲಕ್ ವರ್ಮಾ ದಿಡೀರ್ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಅವರಿಗೆ ಅಂತಹದ್ದೇನಾಗಿದೆ ಇಲ್ಲಿದೆ ನೋಡಿ ವಿವರ.
ಟಿ20 ಕ್ರಿಕೆಟ್ ನಲ್ಲಿ ಭಾರತದ ಪ್ರಮುಖ ಬ್ಯಾಟಿಗರಾಗಿರುವ ತಿಲಕ್ ವರ್ಮ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯಕ್ಕೊಳಗಾಗಿದ್ದರು. ಈ ಸಂಬಂಧ ಅವರು ದಿಡೀರ್ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಸದ್ಯಕ್ಕೆ ಅವರಿಗೆ ವಿಶ್ರಾಂತಿಯ ಅಗತ್ಯವಿದೆ.
ಈ ಕಾರಣಕ್ಕೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಬಳಿಕ ನಡೆಯಲಿರುವ ಟಿ20 ಸರಣಿಯಿಂದ ಅವರು ಹೊರಗುಳಿಯಲಿದ್ದಾರೆ. ಟಿ20 ಸರಣಿ ಬಳಿ ವಿಶ್ವಕಪ್ ಆರಂಭವಾಗಲಿದ್ದು ಈ ವೇಳೆ ಫಿಟ್ ಆಗಿ ಅವರು ತಂಡಕ್ಕೆ ಮರಳುವುದು ಮುಖ್ಯವಾಗಿದೆ.
ಇತ್ತೀಚೆಗೆ ನಡೆದ ಏಷ್ಯಾ ಕಪ್ ನಲ್ಲೂ ಫೈನಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ಟಿ20 ಕ್ರಿಕೆಟ್ ನಲ್ಲಿ ಭರವಸೆಯ ಹೊಡೆಬಡಿಯ ದಾಂಡಿಗ. ಅವರ ಅನುಪಸ್ಥಿತಿ ಟೀಂ ಇಂಡಿಯಾ ನ್ಯೂಜಿಲೆಂಡ್ ಸರಣಿಯಲ್ಲಿ ಕಾಡಲಿದೆ. ಆದರೆ ಟಿ20 ವಿಶ್ವಕಪ್ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಪುನರಾಗಮನ ಮಾಡಿದರೆ ಸಾಕು ಎಂದು ಅಭಿಮಾನಿಗಳು ಪ್ರಾರ್ಥಿಸುವಂತಾಗಿದೆ.