Publish Date: Wed, 07 Jan 2026 (09:34 IST)
Updated Date: Wed, 07 Jan 2026 (09:38 IST)
ಮುಂಬೈ: ಡಬ್ಲ್ಯುಪಿಎಲ್ 2026 ರ ಆವೃತ್ತಿಗೆ ಇನ್ನೇನು ಚಾಲನೆ ಸಿಗಲಿದ್ದು, ಈ ಬಾರಿಯ ಕೂಟವನ್ನು ಎಲ್ಲಿ ಲೈವ್ ವೀಕ್ಷಿಸಬೇಕು, ಎಷ್ಟು ಗಂಟೆಗೆ ಇಲ್ಲಿದೆ ವಿವರ.
ಡಬ್ಲ್ಯುಪಿಎಲ್ 2026 ಜನವರಿ 9 ರಿಂದ ಅಂದರೆ ಶುಕ್ರವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಇದಕ್ಕಿಂದ ಮೊದಲು ಚಾಂಪಿಯನ್ ಆಗಿದ್ದ ಆರ್ ಸಿಬಿಯನ್ನು ಎದುರಿಸಲಿದೆ.
ಆರಂಭಿಕ ಪಂದ್ಯಗಳು ನವಿ ಮುಂಬೈ ಮೈದಾನದಲ್ಲೇ ನಡೆಯಲಿದೆ. ನವಿ ಮುಂಬೈ ಮತ್ತು ವಡೋದರಾದಲ್ಲಿ ಎಲ್ಲಾ ಪಂದ್ಯಗಳು ನಡೆಯಲಿವೆ. ಫೈನಲ್ ಮತ್ತು ಎಲಿಮಿನೇಟರ್ ಪಂದ್ಯಗಳು ವಡೋದರಾದಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳೂ ಸಂಜೆ 7.30 ಕ್ಕೆ ಆರಂಭವಾಗುವುದು.
ಪಂದ್ಯಗಳ ನೇರಪ್ರಸಾರವನ್ನು ಜಿಯೋ ಹಾಟ್ ಸ್ಟಾರ್ ಆಪ್ ಅಥವಾ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ವಾಹಿನಿಗಳಲ್ಲಿ ವೀಕ್ಷಿಸಬಹುದಾಗಿದೆ. ಜನವರಿ 9 ಕ್ಕೆ ಆರಂಭಿಕ ಪಂದ್ಯ ನಡೆದರೆ ಫೆಬ್ರವರಿ 5 ಕ್ಕೆ ಫೈನಲ್ ಪಂದ್ಯ ನಡೆಯುವುದು.