ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ. ಮತ್ತೆ ವಿದೇಶೀ ಬೆಡಗಿಯ ಕೈ ಹಿಡಿಯಲು ಮುಂದಾಗಿದ್ದಾರೆ.
ಶಿಖರ್ ಧವನ್ ಐರಿಷ್ ಬೆಡಗಿ ಸೋಫಿ ಶೈನ್ ಜೊತೆ ಮದುವೆಯಾಗಲಿದ್ದಾರೆ. 40 ವರ್ಷದ ಕ್ರಿಕೆಟಿಗ ಶಿಖರ್ ಧವನ್ ಗೆ ಇದು ಎರಡನೇ ಮದುವೆ. ಇದಕ್ಕಿಂತ ಮೊದಲು ಅವರು ಆಸ್ಟ್ರೇಲಿಯಾ ಮೂಲದ ಆಯೆಷಾ ಮುಖರ್ಜಿಯನ್ನು ಮದುವೆಯಾಗಿದ್ದರು.
ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿಂದ 2023 ರಲ್ಲಿ ವಿಚ್ಛೇದನ ಪಡೆದಿದ್ದರು. ಇಬ್ಬರಿಗೂ ಒಬ್ಬ ಗುಂಡು ಮಗನಿದ್ದು ಆತ ತಾಯಿ ಜೊತೆಗಿದ್ದಾನೆ. ಇದರ ನಡುವೆ ಶಿಖರ್ ಸೋಫಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಹಲವು ಬಾರಿ ಸೋಫಿ ಜೊತೆಗಿರುವ ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೆ.
ಇದೀಗ ಸೋಫಿ ಜೊತೆ ಮದುವೆಯಾಗಲು ತೀರ್ಮಾನಿಸಿದ್ದಾರೆ. ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿಯಲ್ಲಿಯೇ ಇಬ್ಬರೂ ಮದುವೆಯಾಗುತ್ತಿದ್ದಾರೆ. ಐರ್ಲ್ಯಾಂಡ್ ಮೂಲದ ಸೋಫಿ ದುಬೈನಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರ ಉಪಾಧ್ಯಕ್ಷೆಯಾಗಿದ್ದಾರೆ. ಇಬ್ಬರೂ ದುಬೈನಲ್ಲಿ ಪರಸ್ಪರ ಭೇಟಿಯಾಗಿ ಪರಿಚಿತರಾಗಿದ್ದರು. ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.