ನವದೆಹಲಿ: ಈಚೆಗೆ ಪ್ರೀತಿ ವಿಚಾರವಾಗಿ ಸುದ್ದಿಯಲ್ಲಿದ್ದ ಮಾಜಿ ಕ್ರಿಕೆಟರ್ ಶಿಖರ್ ಧವನ್ ಅವರು ಸಂಬಂಧದಲ್ಲಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಭಾರತದ ಮಾಜಿ ಓಪನರ್ ಶಿಖರ್ ಅವರು ಸೋಫಿ ಶೈನ್ ಅವರೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡು, ನನ್ನ ಹೃದಯ (ಎಮೋಜಿ)"ಯನ್ನು ಹಂಚಿಕೊಂಡಿದ್ದಾರೆ.
ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವದಂತಿಗೆ ತೆರೆ ಎಳೆದಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025 ರ ಸಮಯದಲ್ಲಿ, ಶಿಖರ್ ಧವನ್ ಅವರು ಮಾಜಿ ಭಾರತದ ತಾರೆ 'ಮಿಸ್ಟರಿ ವುಮೆನ್' ಸೋಫಿ ಶೈನ್ ಜತೆ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಆ ಮಹಿಳೆ ಐರ್ಲೆಂಡ್ ಮೂಲದ ಸೋಫಿ ಶೈನ್ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ. ಇತ್ತೀಚೆಗಷ್ಟೇ ಧವನ್ ಗೆ ಆ್ಯಂಕರ್ ಒಬ್ಬರು ತಮ್ಮ ಗೆಳತಿ ಮತ್ತು ಆಕೆಯ ಹೆಸರಿನ ಬಗ್ಗೆ ಕೇಳಿದ್ದರು. ಆಂಕರ್‌ನ ಪ್ರಶ್ನೆಗೆ ಧವನ್ ಆರಂಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದರೆ, ನಂತರ ಅವರು ಹೇಳಿದರು: "ನಾನು ಯಾವುದೇ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಈ ಕೋಣೆಯಲ್ಲಿ ಅತ್ಯಂತ ಸುಂದರವಾಗಿರುವ ಹುಡುಗಿಯೇ ನನ್ನ ಗೆಳತಿ ಎಂದು ಹೇಳಿದ್ದರು. ಈ ವೇಳೆ ಎಲ್ಲ ಕ್ಯಾಮಾರಗಳು ಸೋಫಿಯ ಮೇಲೆ ಕೇಂದ್ರೀಕರಿಸಿತು.