Select Your Language

Notifications

webdunia
webdunia
webdunia
webdunia

Shikhar Dhawan : ಐಪಿಎಲ್ ಗೂ ಗುಡ್ ಬೈ ಹೇಳಿದ ಶಿಖರ್ ಧವನ್ ಮುಂದಿನ ಯೋಜನೆ ಇದೇನಾ

Shikhar Dhawan

Krishnaveni K

ನವದೆಹಲಿ , ಮಂಗಳವಾರ, 27 ಆಗಸ್ಟ್ 2024 (09:19 IST)
ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದ ಕ್ರಿಕೆಟಿಗ ಶಿಖರ್ ಧವನ್ ಈಗ ಐಪಿಎಲ್ ಗೂ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಶಿಖರ್ ಧವನ್ ನಿವೃತ್ತಿ ಘೋಷಿಸಿದ ಬಳಿಕ ಅವರು ಇನ್ನು ಮುಂದೆ ಕೇವಲ ಐಪಿಎಲ್ ನಲ್ಲಾದರೂ ಆಡಬಹುದು ಎಂದು ನಂಬಲಾಗಿತ್ತು. ಆದರೆ ಈಗ ಐಪಿಎಲ್ ಗೂ ನಿವೃತ್ತಿ ಘೋಷಿಸಿ ಶಿಖರ್ ಧವನ್ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ. ಜೊತೆಗೆ ಅವರ ಮುಂದಿನ ಯೋಜನೆ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಶಿಖರ್ ಧವನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದ ಬಳಿಕ ಮಗನಿಂದಲೂ ದೂರವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ನಿವೃತ್ತಿಯ ಘೋಷಣೆ ಸಂದರ್ಭದಲ್ಲೂ ತಮ್ಮ ಮಗನ ಬಗ್ಗೆ ನೆನೆಸಿಕೊಂಡು ಭಾವುಕರಾಗಿದ್ದರು. ಇದೀಗ ಐಪಿಎಲ್ ಗೂ ವಿದಾಯ ಘೋಷಿಸಿರುವ ಧವನ್ ಮುಂದಿನ ಯೋಜನೆ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಶಿಖರ್ ಧವನ್ ಕಳೆದ ಸೀಸನ್ ನಲ್ಲಿ ಗಾಯದಿಂದಾಗಿ ಹೆಚ್ಚು ಪಂದ್ಯಗಳನ್ನಾಡಿರಲಿಲ್ಲ. ಈ ಬಾರಿ ಅವರನ್ನು ಪಂಜಾಬ್ ರಿಲೀಸ್ ಮಾಡುವ ಯೋಜನೆಯಲ್ಲಿತ್ತು. ಅವರನ್ನು ಬೇರೆ ತಂಡಗಳು ಖರೀದಿ ಮಾಡುತ್ತದೋ ಎನ್ನುವುದು ಅನುಮಾನ. ಹೀಗಾಗಿ ಅವರು ಐಪಿಎಲ್ ಗೂ ನಿವೃತ್ತಿ ಹೇಳಿದ್ದಾರೆ. ಇದರ ಬದಲು ಅವರು ಲೆಜೆಂಡ್ಸ್ ಕ್ರಿಕೆಟ್ ಲೀಗ್ ನ ಭಾಗವಾಗಲು ಬಯಸಿದ್ದಾರೆ. ಇದಕ್ಕೆ ಬಿಸಿಸಿಐನಿಂದ ನಿರಪೇಕ್ಷಣಾ ಪತ್ರ ಬೇಕಾಗುತ್ತದೆ. ಇದಕ್ಕೆ ಐಪಿಎಲ್ ತೊರೆಯಲೇಬೇಕಾಗುತ್ತದೆ. ಹೀಗಾಗಿ ಅವರು ಐಪಿಎಲ್ ಗೂ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನವನ್ನು ಬಾಂಗ್ಲಾದೇಶ ಟೆಸ್ಟ್ ಪಂದ್ಯದಲ್ಲಿ ಮಣಿಸಿದ ಬೆನ್ನಲ್ಲೇ ಟೀಂ ಇಂಡಿಯಾಗೆ ಶುರುವಾಗಿದೆ ಆತಂಕ