Select Your Language

Notifications

webdunia
webdunia
webdunia
webdunia

ನಾನು ನಿಂತರೂ ಕಷ್ಟ, ಕೂತರೂ ಕಷ್ಟ ಎಂದು ಬೇಸರ ಹೊರಹಾಕಿದ ಕೆಎಲ್ ರಾಹುಲ್

KL Rahul

Krishnaveni K

ಮುಂಬೈ , ಸೋಮವಾರ, 26 ಆಗಸ್ಟ್ 2024 (10:53 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದು, ನಾನು ನಿಂತರೂ ಕಷ್ಟ, ಕೂತರೂ ಕಷ್ಟ ಎಂಬಂತಾಗಿದೆ ಎಂದು ಬೇಸರ ಹೊರಹಾಕಿದ್ದಾರೆ

ಇತ್ತೀಚೆಗೆ ಕೆಎಲ್ ರಾಹುಲ್ ಇನ್ ಸ್ಟಾಗ್ರಾಂನಲ್ಲಿ ಘೋಷಣೆಯೊಂದನ್ನು ಮಾಡಲಿದ್ದೇನೆ ಎಂದಿದ್ದಕ್ಕೆ ಟೀಂ ಇಂಡಿಯಾದಿಂದ ನಿವೃತ್ತಿ ಪಡೆಯುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಅವರು ಮಕ್ಕಳಿಗಾಗಿ ಕ್ರಿಕೆಟ್ ಪರಿಕರಗಳನ್ನು ಹರಾಜಿಗಿಟ್ಟ ಒಳ್ಳೆಯ ಸುದ್ದಿ ನೀಡಿ ನಿವೃತ್ತಿ ವದಂತಿಗಳಿಗೆ ತೆರೆ ಎಳೆದಿದ್ದರು.

ಇದೀಗ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರುವ ಟ್ರೋಲ್ ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ‘ನಾನು ಟ್ರೋಲ್ ಗಳನ್ನು ಚೆನ್ನಾಗಿ ನಿಭಾಯಿಸುತ್ತೆನೆ. ಅದಕ್ಕೆಲ್ಲಾ ಕೇರ್ ಮಾಡಲ್ಲ. ಕೆಲವು ಸಮಯದ ಮೊದಲು ನಾನು ಸಾಕಷ್ಟು ಟ್ರೋಲ್ ಗೆ ಆಹಾರವಾಗಿದ್ದೆ. ನಾನು ನಿಂತರೂ ತಪ್ಪು, ಕೂತರೂ ತಪ್ಪು ಎಂಬಂತಾಗಿತ್ತು ಪರಿಸ್ಥಿತಿ. ಈಗ ಟ್ರೋಲ್ ಗಳನ್ನು ಎದುರಿಸಲು ಕಲಿತಿದ್ದೇನೆ. ಕಳೆದ ಒಂದೂವರೆ ವರ್ಷದಲ್ಲಿ ಇನ್ ಸ್ಟಾಗ್ರಾಂಗೆ ಚೆನ್ನಾಗಿ ಹೊಂದಿಕೊಂಡಿದ್ದೇನೆ. ನನ್ನ ಕೆಲಸ ಮಾಡಿ ತಕ್ಷಣ ಅದರಿಂದ ಹೊರಬರುತ್ತೇನೆ’ ಎಂದಿದ್ದಾರೆ ರಾಹುಲ್.

ಕೆಲವು ಸಮಯದ ಮೊದಲು ಕಾಫಿ ವಿತ್ ಕರಣ್ ಶೋನಲ್ಲಿ ಮಾಡಿದ ಕಾಮೆಂಟ್ ನಿಂದಾಗಿ ಹಾರ್ದಿಕ್ ಪಾಂಡ್ಯ ಜೊತೆಗೆ ನಿಷೇಧಕ್ಕೊಳಗಾಗಿದ್ದರ ಬಗ್ಗೆಯೂ ಮಾತನಾಡಿದ್ದಾರೆ. ನಾನು ನನ್ನ ಶಾಲಾ ದಿನಗಳಲ್ಲೂ ಒಮ್ಮೆಯೂ ಡಿಬಾರ್ ಆಗಿರಲಿಲ್ಲ. ಆದರೆ ಅದೇ ಮೊದಲ ಬಾರಿಗೆ ಒಂದು ಶೋನಲ್ಲಿ ಭಾಗಿಯಾಗಿ ಅಮಾನತಾಗಿದ್ದೆ. ಆಗಲೇ ನನಗೆ ಅದರ ಗಂಭೀರತೆ ಅರಿವಾಗಿದ್ದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಟಿಂಗ್‌ ಮಾಡಿದ ಮನು ಭಾಕರ್‌, ಶೂಟಿಂಗ್‌ನಲ್ಲಿ ಗುರಿಯಿಟ್ಟ ಸೂರ್ಯಕುಮಾರ್: ಹೊಸ ಕ್ರೀಡೆಯತ್ತ ತಾರೆಯರ ಚಿತ್ತ