Select Your Language

Notifications

webdunia
webdunia
webdunia
webdunia

ಬ್ಯಾಟಿಂಗ್‌ ಮಾಡಿದ ಮನು ಭಾಕರ್‌, ಶೂಟಿಂಗ್‌ನಲ್ಲಿ ಗುರಿಯಿಟ್ಟ ಸೂರ್ಯಕುಮಾರ್: ಹೊಸ ಕ್ರೀಡೆಯತ್ತ ತಾರೆಯರ ಚಿತ್ತ

Shooter Manu bhakar

Sampriya

ಮುಂಬೈ , ಭಾನುವಾರ, 25 ಆಗಸ್ಟ್ 2024 (13:25 IST)
Photo Courtesy X
ಮುಂಬೈ: ಈಚೆಗೆ ನಡೆದ ಪ್ಯಾರಿಸ್​ ಒಲಿಂಪಿಕ್ಸ್​ ಶೂಟಿಂಗ್​ನಲ್ಲಿ ಅವಳಿ ಪದಕ ಗೆದ್ದಿರುವ ಮನು ಭಾಕರ್ ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್​ ಯಾದವ್ ಅವರನ್ನು ಮುಂಬೈಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಇವರಿಬ್ಬರು ವಿಭಿನ್ನ ಶೈಲಿಯಲ್ಲಿ ಫೋಟೊಗೆ ಫೋಸ್‌ ನೀಡಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಮೂರು ತಿಂಗಳ ವಿಶ್ರಾಂತಿ ಬಯಸಿರುವ ಮನು ಭಾಕರ್​ ತಮ್ಮ ನೆಚ್ಚಿನ ಕಾರ್ಯ ಚಟುವಟಿಯಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈಗೆ ಬಂದಿರುವ ವೇಳೆ ಕ್ರಿಕೆಟಿಗ ಸೂರ್ಯಕುಮಾರ್ ಅವರನ್ನು​ ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯಕುಮಾರ್​ ಶೂಟಿಂಗ್‌ ಗನ್​ ಹಿಡಿದಂತೆ, ಮನು ಭಾಕರ್​ ಬ್ಯಾಟ್​ ಬೀಸಿದಂತೆ ನಗುಮುಗದಿಂದಲೇ ಫೋಟೊಗೆ ಫೋಸ್‌ ನೀಡಿದ್ದಾರೆ.

ಈ ಫೋಟೊವನ್ನು ಮನು ಭಾಕರ್​ ಅವರು ತಮ್ಮ ಟ್ವಿಟರ್ ಎಕ್ಸ್​ನಲ್ಲಿ ಹಂಚಿಕೊಂಡಿದ್ದು, ಟೀಮ್​ ಇಂಡಿಯಾದ ಮಿಸ್ಟರ್ 360 ಅವರೊಂದಿಗೆ ಹೊಸ ಕ್ರೀಡೆಯ ಕಲಿಕೆಯ ತಂತ್ರಗಳು! ಎಂದು ಬರೆದುಕೊಂಡಿದ್ದಾರೆ. ಒಲಿಂಪಿಕ್ಸ್​ ಪದಕ ಗೆದ್ದಾಗ ಮನು ಭಾಕರ್​ ಅವರಿಗೆ ಸೂರ್ಯಕುಮಾರ್​ ಎಕ್ಸ್​ನಲ್ಲಿ ಅಭಿನಂದನೆ ಸಲ್ಲಿಸಿದ್ದರು.

22 ವರ್ಷದ ಮನು ಭಾಕರ್ ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.

ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್​ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್‌ ಧೋನಿ: ಇದು ಐಪಿಎಲ್‌ಗೆ ಸಿದ್ಧತೆ ಎಂದ ಫ್ಯಾನ್ಸ್‌