Select Your Language

Notifications

webdunia
webdunia
webdunia
webdunia

ಕೆಎಲ್ ರಾಹುಲ್ ನಿವೃತ್ತಿ ಘೋಷಣೆ: ಘೋಷಣೆ ಮಾಡಬೇಕಿದೆ ಎಂದು ಇದೇನು ಹೀಗೆ ಹೇಳಿಬಿಟ್ಟರು ಕೆಎಲ್ ಫ್ಯಾನ್ಸ್ ಬೇಸರ

KL Rahul
ಮುಂಬೈ: ಟೀಂ ಇಂಡಿಯಾ ಪ್ರತಿಭಾವಂತ ಕ್ರಿಕೆಟಿಗ ಕೆಎಲ್ ರಾಹುಲ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರಾ? ಹೀಗೊಂದು ಅನುಮಾನ ಹುಟ್ಟಿಸುವಂತಹ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ಕೆಎಲ್ ರಾಹುಲ್ ನಿನ್ನೆ ಸಂಜೆ ‘ಒಂದು ಘೋಷಣೆ ಮಾಡಬೇಕಿದೆ. ಕಾಯ್ತಾ ಇರಿ’ ಎಂದು ಪೋಸ್ಟ್ ಒಂದನ್ನು ಮಾಡಿದ್ದರು. ಇದರ ಬೆನ್ನಲ್ಲೇ ಅವರು ನಿವೃತ್ತಿ ಹೇಳಬಹುದಾ, ಆರ್ ಸಿಬಿಗೆ ಸೇರುವ ಬಗ್ಗೆ ಹೇಳಬಹುದಾ ಎಂದೆಲ್ಲಾ ಊಹಾಪೋಹಗಳು ಹರಿದಾಡಿದ್ದವು. ಇಂದು ರಾಹುಲ್ ಇನ್ ಸ್ಟಾ ಸ್ಟೋರಿಯಲ್ಲಿ ನಿವೃತ್ತಿ ಬಗ್ಗೆ ಘೋಷಣೆ ಮಾಡಿರುವ ಪೋಸ್ಟ್ ಒಂದು ವೈರಲ್ ಆಗಿದೆ.

ಸಾಕಷ್ಟು ಯೋಚಿಸಿದ ಬಳಿಕ ನಾನು ನನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುತ್ತಿದ್ದೇನೆ ಎಂದು ಆರಂಭವಾಗುವ ಸುದೀರ್ಘ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈಗಲೇ ನಿವೃತ್ತಿ ಯಾಕೆ ಬೇಕಿತ್ತು ಎನ್ನುತ್ತಿದ್ದಾರೆ.

ಆದರೆ ಅಸಲಿ ಕತೆ ಬೇರೆಯೇ ಇದೆ. ಅಸಲಿಗೆ ಇಂತಹದ್ದೊಂದು ಸ್ಟೋರಿಯನ್ನು ರಾಹುಲ್ ಪೋಸ್ಟ್ ಮಾಡಿಯೇ ಇಲ್ಲ. ಯಾರೋ ನಿನ್ನೆ ರಾಹುಲ್ ಘೋಷಣೆ ಮಾಡಬೇಕಿದೆ ಎಂದಿದ್ದಕ್ಕೆ ಅವರದೇ ಸ್ಟೋರಿಯಲ್ಲಿ ಅವರು ನಿವೃತ್ತಿ ಮೆಸೇಜ್ ಬರೆದಿರುವಂತೆ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದುವರೆಗೆ ರಾಹುಲ್ ಆಗಲೀ ಬಿಸಿಸಿಐ ಆಗಲೀ ಅವರ ನಿವೃತ್ತಿ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಯಾರೋ ಹರಡುತ್ತಿರುವ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ವಿಷಯ ಹೇಳಬೇಕಾಗಿದೆ ಎಂದು ಫ್ಯಾನ್ಸ್ ತಲೆಗೆ ಹುಳ ಬಿಟ್ಟ ಕೆಎಲ್ ರಾಹುಲ್