Select Your Language

Notifications

webdunia
webdunia
webdunia
webdunia

ಒಳ್ಳೆ ದುಡ್ಡು ಕೊಡ್ತಾರೆಂದರೆ ನನ್ನ ಬಯೋಪಿಕ್ ನಲ್ಲಿ ನಾನೇ ನಟಿಸ್ತೀನಿ: ರಾಹುಲ್ ದ್ರಾವಿಡ್

Rahul Dravid

Krishnaveni K

ಮುಂಬೈ , ಗುರುವಾರ, 22 ಆಗಸ್ಟ್ 2024 (16:12 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗನಾಗಿ, ಕೋಚ್ ಆಗಿ ಯಶಸ್ವಿಯಾಗಿ ತಮ್ಮ ವೃತ್ತಿ ಜೀವನ ಮುಗಿಸಿರುವ ರಾಹುಲ್ ದ್ರಾವಿಡ್ ತಮ್ಮ ಬಯೋಪಿಕ್ ನಿರ್ಮಾಣವಾದರೆ ಒಳ್ಳೆ ಸಂಭಾವನೆ ಕೊಟ್ಟರೆ ನಾನೇ ನಟಿಸ್ತೀನಿ ಎಂದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ.

ರಾಹುಲ್ ದ್ರಾವಿಡ್ ಸ್ವಭಾವತಃ ಶಾಂತ, ಸೀರಿಯಸ್ ಮನುಷ್ಯ ಎನಿಸಿದರೂ ಕೆಲವೊಮ್ಮೆ ಅವರ ಫನ್ನಿ ಸೈಡ್ ಬಹಿರಂಗವಾದ ಅನೇಕ ಉದಾಹರಣೆಗಳಿವೆ. ಇದೀಗ ಸಿಯೆಟ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜೀವಮಾನ ಶ್ರೇಷ್ಠ ಪ್ರಶಸ್ತಿ ಪಡೆದ ರಾಹುಲ್ ದ್ರಾವಿಡ್ ರನ್ನು ವೇದಿಕೆಯಲ್ಲೇ ಸಂದರ್ಶಿಸಲಾಯಿತು.

ಈ ವೇಳೆ ಸಂದರ್ಶಕರು ಒಂದು ವೇಳೆ ನಿಮ್ಮ ಬಯೋಪಿಕ್ ನಿರ್ಮಾಣ ಮಾಡುವುದಾದರೆ ನಿಮ್ಮ ಪಾತ್ರ ಮಾಡಲು ಯಾರು ಸೂಕ್ತ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ದ್ರಾವಿಡ್ ‘ಒಂದು ವೇಳೆ ಒಳ್ಳೆ ಸಂಭಾವನೆ ಕೊಡ್ತಾರೆ ಎಂದಾದರೆ ನಾನೇ ನಟಿಸಲು ರೆಡಿ’ ಎಂದು ನಗುತ್ತಾ ಹೇಳಿದರು. ಆಗ ಅಲ್ಲಿದ್ದವರು ನಗೆಗಡಲಲ್ಲಿ ತೇಲಿದರು.

ದ್ರಾವಿಡ್ ನಟನೆ ಕೌಶಲ್ಯ ಬಗ್ಗೆ ಅಭಿಮಾನಿಗಳಿಗೆ ಈಗಾಗಲೇ ಜಾಹೀರಾತುಗಳ ಮೂಲಕ ಗೊತ್ತಾಗಿದೆ. ಅದರಲ್ಲೂ ಅವರ ಇಂದಿರಾ ನಗರ್ ಕೆ ಗೂಂಡಾ ಜಾಹೀರಾತು ಭಾರೀ ಜನಪ್ರಿಯವಾಗಿತ್ತು. ಇದೀಗ ದ್ರಾವಿಡ್ ತಮ್ಮ ಬಯೋಪಿಕ್ ನಲ್ಲಿ ತಾವೇ ನಟಿಸಿದರೂ ಅಭಿಮಾನಿಗಳಂತೂ ಖಂಡಿತಾ ಇಷ್ಟಪಡುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

5 ಐಪಿಎಲ್ ಟ್ರೋಫಿ ಸುಮ್ನೇ ಗೆದ್ದಿಲ್ಲ, ವಿಶ್ವಕಪ್ ಗೆಲುವಿನ ರುಚಿ ಸಿಕ್ಕಿದೆ ಇನ್ನು ಬಿಡಲ್ಲ: ರೋಹಿತ್ ಶರ್ಮಾ ವಾರ್ನಿಂಗ್