ಜೈಪುರ: ಐಪಿಎಲ್ 2025 ರಲ್ಲಿರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯಕುಮಾರ್ ಯಾದವ್ ಗಲ್ಲಿ ಕ್ರಿಕೆಟ್ ನಂತೆ ಚೆಂಡು ಹುಡುಕಾಡಿದ ಫನ್ನಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆಯ ಪಂದ್ಯವನ್ನು ಮುಂಬೈ ಇಂಡಿಯನ್ಸ್ 100 ರನ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 217 ರನ್ ಗಳಿಸಿತ್ತು. ರಾಜಸ್ಥಾನ್ 117 ರನ್ ಗಳಿಗೇ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ರಾಜಸ್ಥಾನ್ ಇನಿಂಗ್ಸ್ ವೇಳೆ ಬ್ಯಾಟಿಗ ಹೊಡೆದ ಚೆಂಡು ಸಿಕ್ಸರ್ ರೂಪದಲ್ಲಿ ನೇರವಾಗಿ ಕ್ಯಾಮರಾಮ್ಯಾನ್ ಗಳು ಕೂತಿದ್ದ ಜಾಗಕ್ಕೇ ಬಿತ್ತು. ಚೆಂಡು ಪಡೆಯಲು ಬಂದ ಸೂರ್ಯಕುಮಾರ್ ಯಾದವ್ ಗೆ ಎಲ್ಲಿ ಹುಡುಕಿದರೂ ಚೆಂಡು ಕಾಣಲಿಲ್ಲ.
ಹೀಗಾಗಿ ನೇರವಾಗಿ ಬೋರ್ಡ್ ಮೇಲೆ ಹತ್ತಿ, ಬಗ್ಗೆ ನೋಡಿ ಥೇಟ್ ಗಲ್ಲಿ ಕ್ರಿಕೆಟಿಗನಂತೇ ಚೆಂಡಿಗಾಗಿ ಹುಡುಕಾಡಿದರು. ಆದರೆ ಎಷ್ಟೇ ಹುಡುಕಿದರೂ ಚೆಂಡು ಸಿಗಲಿಲ್ಲ. ಕೊನೆಗೆ ಅಲ್ಲಿ ಕೂತಿದ್ದ ಕ್ಯಾಮರಾ ಮ್ಯಾನ್ ಗಳೂ ಹುಡುಕಾಡಲು ಪ್ರಾರಂಭಿಸಿದರು. ಸೂರ್ಯಕುಮಾರ್ ಯಾದವ್ ಗೆ ಸಹಾಯ ಮಾಡಲು ಮತ್ತೊಬ್ಬ ಮುಂಬೈ ಆಟಗಾರನೂ ಸಾಥ್ ನೀಡಿದ್ದರು. ಈ ಫನ್ನಿ ವಿಡಿಯೋ ಇಲ್ಲಿದೆ ನೋಡಿ.