ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಔಟಾಗಿದ್ದಕ್ಕೆ ಅನಿಲ್ ಕುಂಬ್ಳೆ ಎಷ್ಟು ಸಿಟ್ಟಾಗಿದ್ದರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.
ನಿನ್ನೆ ನಾಲ್ಕನೇ ದಿನದಲ್ಲಿ ಭಾರತ 549 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿತ್ತು. ಸೋಲಿನ ಸುಳಿಯಲ್ಲಿರುವ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಆಧಾರವಾಗಬೇಕಿತ್ತು. ಆದರೆ ಸ್ಪಿನ್ ಬೌಲಿಂಗ್ ನಲ್ಲಿ ಕಳಪೆ ಹೊಡೆತಕ್ಕೆ ಕೈ ಹಾಕಿ ರಾಹುಲ್ ಕೇವಲ 6 ರನ್ ಗಳಿಸಿ ಔಟಾದರು.
ಈ ಹೊಡೆತದ ಬಗ್ಗೆ ಕಾಮೆಂಟರಿ ಮಾಡುತ್ತಿದ್ದ ಪಾರ್ಥಿವ್ ಪಟೇಲ್ ಮತ್ತು ಅನಿಲ್ ಕುಂಬ್ಳೆ ವಿಶ್ಲೇಷಣೆ ನಡೆಸುತ್ತಿದ್ದರು. ರಾಹುಲ್ ಬೇಜವಾಬ್ಧಾರಿಯುತ ಹೊಡೆತವನ್ನು ಕೈ ಸನ್ನೆಯಲ್ಲಿ ಮಾಡಿ ತೋರಿಸಿದ ಅನಿಲ್ ಕುಂಬ್ಳೆ ಸಿಟ್ಟು ಪ್ರದರ್ಶಿಸಿದರು.
ವಿಪರ್ಯಾಸವೆಂದರೆ ಟೀಂ ಇಂಡಿಯಾ ಆಟಗಾರರು ಸ್ಪಿನ್ ಬೌಲಿಂಗ್ ನ್ನೂ ಎದುರಿಸಲಾಗದೇ ಔಟಾಗುತ್ತಿದ್ದಾರೆ. ಅದೂ ಸ್ವದೇಶೀ ಪಿಚ್ ಗಳಲ್ಲಿ ಈ ಪರಿಯ ದಯನೀಯ ಸ್ಥಿತಿ ಎಲ್ಲರಿಗೂ ಸಿಟ್ಟು ತರಿಸುತ್ತಿದೆ. ಫ್ಯಾನ್ಸ್ ಅಂತೂ ನೋಡುವ ಆಸಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡಿದೆ.